For the best experience, open
https://m.newskannada.com
on your mobile browser.
Advertisement

ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ಹೊರತರುವ ವಿಡಿಯೋ ಬಿಡುಗಡೆ ಮಾಡಿದ ಎನ್‌ಡಿಆರ್‌ಎಫ್

ಡೆಹ್ರಾಡೂನ್​: ಕುಸಿದ ಸುರಂಗದಲ್ಲಿ ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಕೆಲವೇ ಕ್ಷಣಗಳಲ್ಲಿ ಸುರಂಗದಿಂದ ಹೊರ ಕರೆತರಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಆರ್​ಎಫ್​)ದ ಅಧಿಕಾರಿಗಳು ತಿಳಿಸಿದ್ದಾರೆ.
02:11 PM Nov 24, 2023 IST | Ashitha S
ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ಹೊರತರುವ ವಿಡಿಯೋ ಬಿಡುಗಡೆ ಮಾಡಿದ ಎನ್‌ಡಿಆರ್‌ಎಫ್

ಡೆಹ್ರಾಡೂನ್​: ಕುಸಿದ ಸುರಂಗದಲ್ಲಿ ಕಳೆದ 13 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಕೆಲವೇ ಕ್ಷಣಗಳಲ್ಲಿ ಸುರಂಗದಿಂದ ಹೊರ ಕರೆತರಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಆರ್​ಎಫ್​)ದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದೀಗ ಎನ್​ಡಿಆರ್​ಎಫ್​ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಯಾವ ರೀತಿ ಹೊರ ತೆಗೆಯಲಾಗುತ್ತದೆ ಎಂಬುದನ್ನು ಪ್ರದರ್ಶಿಸಲಾಗಿದೆ. ಸ್ವತಃ ರಕ್ಷಣಾ ಕಾರ್ಯಕರ್ತರು ಪೈಪ್​ ಒಳಗೆ ಹೋಗಿ ಗಾಲಿ ಸ್ಟ್ರೆಚರ್​ನಲ್ಲಿ ಹೊರಗಡೆ ಬರುವ ದೃಶ್ಯವಿದೆ. ಪೈಪ್​ಗಳನ್ನು ವೆಲ್ಡಿಂಗ್​ ಮಾಡಿರುವ ಕಾರಣ ಕಾರ್ಮಿಕರು ತೆವಳುವಾಗ ತರಚಿ ಗಾಯಗಳಾಗಬಹುದು ಎಂಬ ಕಾರಣಕ್ಕೆ ಗಾಲಿ ಸ್ಟ್ರೆಚರ್​ ಸಹಾಯದಿಂದ ಹೊರಗೆ ತರಲು ಎನ್​ಡಿಆರ್​ಎಫ್​ ಸಲಕ ಸಿದ್ಧತೆಯನ್ನು ಮಾಡಿಕೊಂಡಿದೆ.

ಕಾರ್ಮಿಕರಿಗೆ ಒಬ್ಬೊಬ್ಬರಾಗಿ ತೆವಳುವ ಆಯ್ಕೆಯನ್ನು ಸಹ ಪರಿಗಣಿಸಿದ್ದರೂ ಅವರ ಆರೋಗ್ಯ ಸ್ಥಿತಿಯು ಸ್ಟ್ರೆಚರ್​ ಮೇಲೆ ಹೆಚ್ಚು ಅವಲಂಬನೆಯಾಗಿರುತ್ತದೆ. ಇನ್ನು ಉತ್ತರಕಾಶಿ ಜಿಲ್ಲೆಯಲ್ಲಿರುವ ಸಿಲ್ಕ್​ಯಾರ್​ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಗಳು ಅಂತಿಮ ಘಟ್ಟಕ್ಕೆ ಬಂದಿದೆ. ಒಂದೇರಡು ದಿನಗಳಲ್ಲಿ ಕಾರ್ಮಿಕರು ಹೊರ ಬರುವ ಸಾಧ್ಯತೆಯಿದೆ.

Advertisement

Advertisement
Tags :
Advertisement