ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚೀನಿ ಆ್ಯಪ್ ಜಾಲ: ಕಾಂಬೋಡಿಯಾದಲ್ಲಿ ಸಿಲುಕಿದ್ದ ಚಿಕ್ಕಮಗಳೂರಿನ ಯುವಕನ ರಕ್ಷಣೆ

ಇತ್ತೀಚೆಗೆ ಚೀನಾದ ಆ್ಯಪ್ಗಳು ಅಮಾಯಕ ಯುವಕರನ್ನು ವಿವಿಧ ರೀತಿಯಲ್ಲಿ ಮೋಸದ ಬಲೆಗೆ ಸಿಲುಕಿಸುವ ಮಾಯದಾಟ ಮಾಡುತ್ತಿವೆ.
05:04 PM Nov 04, 2023 IST | Ramya Bolantoor

ಬೆಂಗಳೂರು: ಇತ್ತೀಚೆಗೆ ಚೀನಾದ ಆ್ಯಪ್ಗಳು ಅಮಾಯಕ ಯುವಕರನ್ನು ವಿವಿಧ ರೀತಿಯಲ್ಲಿ ಮೋಸದ ಬಲೆಗೆ ಸಿಲುಕಿಸುವ ಮಾಯದಾಟ ಮಾಡುತ್ತಿವೆ. ಅದೇ ರೀತಿ ಮಲೆನಾಡಿನ ಯುವಕನೊಬ್ಬ ದೂರದ ಕಾಂಬೋಡಿಯದಲ್ಲಿ ಉದ್ಯೋಗಕ್ಕಾಗಿ ತೆರಳಿ ಲಾಕ್‌ ಆಗಿದ್ದು, ಇದೀಗ ಹಲವು ರೀತಿಯ ಪ್ರಯತ್ನಗಳ ಬಳಿಕ ಸ್ವದೇಶಕ್ಕೆ ಮರಳು ಯತ್ನದಲ್ಲಿದ್ದಾನೆ.

Advertisement

ಕಳೆದ ಮೂರು ತಿಂಗಳ ಹಿಂದೆ ಕಾಂಬೋಡಿಯಾ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ಚಿಕ್ಕಮಗಳೂರು ಜಿಲ್ಲೆಯ N.R ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಅಶೋಕ್ ಚೀನಿ ಆ್ಯಪ್ ಮಾಫಿಯಾದಲ್ಲಿ ಸಿಲುಕಿದ್ದ. ವಂಚನೆಯ ಟಾರ್ಗೆಟ್ ನೀಡುತ್ತಿದ್ದ ಚೀನಿ ಆ್ಯಪ್ ಕಂಪನಿ ಟಾರ್ಗೆಟ್ ಪೂರ್ಣ ಮಾಡದ ಹಿನ್ನೆಲೆ ಅಶೋಕ್ ಗೆ ಚಿತ್ರಹಿಂಸೆ ನೀಡಿತ್ತು. ಅಶೋಕ್ ನನ್ನ ಬಂಧನದಲ್ಲಿ ಇರಿಸಿ 13 ಲಕ್ಷ ರೂ. ಹಣಕ್ಕಾಗಿ ಅಶೋಕ್ ಪೋಷಕರಿಗೆ ಬೇಡಿಕೆ ಹಾಕಿತ್ತು. ಆಶೋಕ್ ನನ್ನ ವಾಪಸ್ ಭಾರತಕ್ಕೆ ಕರೆತರುವಂತೆ ಆಶೋಕ್ ಕುಟುಂಬ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಮೂಲಕ ರಾಜ್ಯ,ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.

ಈ ಬೆನ್ನಲ್ಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಂದಿಸಿದ್ದರು. ಆಶೋಕ್ ನನ್ನ ರಕ್ಷಣೆ ಮಾಡುವಂತೆ ಕಾಂಬೋಡಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ಮನವಿ ಮಾಡಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳು ಕಾಂಬೋಡಿಯಾದ ವಿಯೆಟ್ನಾಂ ಬಾರ್ಡರ್ ನಲ್ಲಿರುವ ಚೀನಿ ಆ್ಯಪ್ ಕಚೇರಿಗೆ ಭೇಟಿ ನೀಡಿ ಆಶೋಕ್ ರಕ್ಷಣೆ ಮಾಡಲಾಗಿದ್ದು, ಆಶೋಕ್ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳ ಜೊತೆಯಿದ್ದು ,ಸೋಮವಾರದ ಬಳಿಕ ಭಾರತಕ್ಕೆ ಆಶೋಕ್ ಕರೆತರಲು ಸಿದ್ದತೆ ಮಾಡಲಾಗುತ್ತಿದೆ.

Advertisement

Advertisement
Tags :
indiaLatetsNewsNewsKannadaYOUTHಬೆಂಗಳೂರು
Advertisement
Next Article