For the best experience, open
https://m.newskannada.com
on your mobile browser.
Advertisement

ಮದುವೆಯಾದ ಮಾತ್ರಕ್ಕೆ ಆಧಾರ್‌ ದತ್ತಾಂಶ ಪತ್ನಿಗೂ ಕೊಡಲಾಗದು: ಹೈಕೋರ್ಟ್‌

ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಹೆಂಡತಿಗೆ ಕೊಡುವಂತಿಲ್ಲ ಎಂದು ಹೈಕೊರ್ಟ್‌ ಹೇಳಿದೆ.
10:07 AM Nov 29, 2023 IST | Ramya Bolantoor
ಮದುವೆಯಾದ ಮಾತ್ರಕ್ಕೆ ಆಧಾರ್‌ ದತ್ತಾಂಶ ಪತ್ನಿಗೂ ಕೊಡಲಾಗದು  ಹೈಕೋರ್ಟ್‌

ಬೆಂಗಳೂರು: ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಹೆಂಡತಿಗೆ ಕೊಡುವಂತಿಲ್ಲ ಎಂದು ಹೈಕೊರ್ಟ್‌ ಹೇಳಿದೆ.

Advertisement

ಕೌಟುಂಬಿಕ ಕಲಹಕ್ಕೆ ಸಂಬಂಧಸಿದಂತೆ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಮತ್ತು ಉಪ ಮಹಾನಿರ್ದೇಶಕ ಹಾಗೂ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಹಾಗೂ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ತಿರಸ್ಕರಿಸಿದೆ.

ಆಧಾರ್‌ ಹಲವಾರು ವೈಯಕ್ತಿಕ ಗೌಪ್ಯತಾ ಮಾಹಿತಿಗಳು ಇರುತ್ತದೆ. ಅದು ಅವರ ಖಾಸಗಿ ಹಕ್ಕಾಗಿರುತ್ತದೆ. ಮದುವೆಯಾಗುವ ಮೂಲಕ ಅವರು ಈ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಹೀಗಾಗಿ ಅವುಗಳನ್ನು ಪತ್ನಿಗೂ ಕೊಡಲು ಅವಕಾಶವಿಲ್ಲ ಪತ್ನಿಯೊಬ್ಬರ ವಾದವನ್ನು ಒಪ್ಪಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಪ್ರಕರಣವೇನು?

ಪ್ರಕರಣದ ಅರ್ಜಿದಾರಳಾದ ಪತ್ನಿ 2005ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ದಂಪತಿಗೆ ಹೆಣ್ಣು ಮಗುವಿದೆ. ಕೌಟುಂಬಿಕ ಕಲಹ ಹಿನ್ನಲೆ ಪತಿಯ ವಿರುದ್ಧ ದಾವೆ ಹೂಡಿದ್ದ ಆಕೆಗೆ ಕೌಟುಂಬಿಕ ನ್ಯಾಯಾಲಯ ₹ 10 ಸಾವಿರ ಹಾಗೂ ಹೆಣ್ಣು ಮಗುವಿಗೆ ₹ 5 ಸಾವಿರ ಜೀವನಾಂಶ ನೀಡುವಂತೆ ಆದೇಶವನ್ನು ನೀಡಿತ್ತು.

‘ಪತಿ ಈ ಮೊದಲಿದ್ದ ವಿಳಾಸದಲ್ಲಿ ಇಲ್ಲ, ತಲೆ ಮರೆಸಿಕೊಂಡಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಲು ಆಗಿಲ್ಲ‘ ಎಂಬ ಕಾರಣಕ್ಕೆ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಆಗಿರಲಿಲ್ಲ. ಹೀಗಾಗಿ, ಪತ್ನಿಯು ಆರ್‌ಟಿಐ ಕಾಯ್ದೆ ಅಡಿಯಲ್ಲಿ ಯುಐಡಿಎಐಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು 2021ರ ಫೆಬ್ರುವರಿ 25ರಂದು ತಿರಸ್ಕರಿಸಿದ್ದ ಯುಐಡಿಎಐ, ‘ಪತಿಯ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.

Advertisement
Tags :
Advertisement