For the best experience, open
https://m.newskannada.com
on your mobile browser.
Advertisement

ಒಮಾನ್‌ನಲ್ಲಿ ಪ್ರವಾಹಕ್ಕೆ 13 ಮಂದಿ ಬಲಿ; ನೋಡ್ತಿದ್ದಂತೇ ಕೊಚ್ಚಿ ಹೋದ ವಾಹನ

ಒಮಾನ್‌ನಲ್ಲಿ ಇಂದು ಭಾರೀ ಮಳೆ ಮುಂದುವರಿದಿದ್ದು, ಹಠಾತ್‌ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ವಾಹನಗಳು ಕೊಚ್ಚಿ ಹೋಗಿವೆ.
05:00 PM Apr 15, 2024 IST | Ashitha S
ಒಮಾನ್‌ನಲ್ಲಿ ಪ್ರವಾಹಕ್ಕೆ 13 ಮಂದಿ ಬಲಿ  ನೋಡ್ತಿದ್ದಂತೇ ಕೊಚ್ಚಿ ಹೋದ ವಾಹನ

ಮಸ್ಕತ್:‌ ಒಮಾನ್‌ನಲ್ಲಿ ಇಂದು ಭಾರೀ ಮಳೆ ಮುಂದುವರಿದಿದ್ದು, ಹಠಾತ್‌ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ವಾಹನಗಳು ಕೊಚ್ಚಿ ಹೋಗಿವೆ.

Advertisement

ಉತ್ತರ ಅಲ್ ಶರ್ಕಿಯಾ ಗವರ್ನರೇಟ್‌ನಲ್ಲಿ ನಾಗರಿಕ ರಕ್ಷಣಾ ಮತ್ತು ಅಂಬುಲೆನ್ಸ್ ವಿಭಾಗದ ಶೋಧ ತಂಡಗಳ ಕಾರ್ಯಾಚರಣೆಯಿಂದಾಗಿ ಓರ್ವನ ಶವವನ್ನು ಹೊರತೆಗೆಯಲಾಗಿದೆ. ಮಗು ಸೇರಿದಂತೆ ಉಳಿದ ಮೂವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಪ್ರವಾಹದಿಂದಾಗಿ ಭಾನುವಾರ ಕನಿಷ್ಟ 12 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 9 ವಿದ್ಯಾರ್ಥಿಗಳು, ಇಬ್ಬರು ಸ್ಥಳೀಯ ನಿವಾಸಿಗಳು ಮತ್ತು ವಲಸಿಗರೊಬ್ಬರು ಸೇರಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Advertisement

Advertisement
Tags :
Advertisement