For the best experience, open
https://m.newskannada.com
on your mobile browser.
Advertisement

ದಕ್ಷಿಣ ಅಮೆರಿಕದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾಗಿ 14 ಪ್ರಯಾಣಿಕರ ದುರ್ಮರಣ

ದಕ್ಷಿಣ ಅಮೆರಿಕದ ಮೆಕ್ಸಿಕೋ ರಾಜಧಾನಿಯ ಹೊರವಲಯದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾದ ಘಟನೆ ನಡೆದಿದೆ. 
12:13 PM Apr 29, 2024 IST | Ashika S
ದಕ್ಷಿಣ ಅಮೆರಿಕದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾಗಿ 14 ಪ್ರಯಾಣಿಕರ ದುರ್ಮರಣ

ದಕ್ಷಿಣ ಅಮೆರಿಕ: ದಕ್ಷಿಣ ಅಮೆರಿಕದ ಮೆಕ್ಸಿಕೋ ರಾಜಧಾನಿಯ ಹೊರವಲಯದಲ್ಲಿ ರಸ್ತೆ ಮಧ್ಯೆ ಬಸ್​  ಪಲ್ಟಿಯಾದ ಘಟನೆ ನಡೆದಿದೆ.

Advertisement

ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಬಸ್ ಏಕಾಏಕಿ​ ಪಲ್ಟಿಯಾಗಿ ಬೀಳುತ್ತಿದ್ದಂತೆ ಒಳಗಿದ್ದ 14 ಜನರು ಮೃತಪಟ್ಟರೇ, 31 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯಲ್ಲಿ ಕೆಲವರ ಸ್ಥಿತಿ ತೀವ್ರವಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಂಭವವಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇನ್ನು ಬಸ್ ಪಲ್ಟಿಯಾದ ರಭಸಕ್ಕೆ 10 ರಿಂದ 15 ಮೀಟರ್​ಷ್ಟು ದೂರ ರಸ್ತೆಗೆ ಉಜ್ಜಿಕೊಂಡು ಹೋಗಿದ್ದರಿಂದ ಟೈರ್​ಗಳು ಬೇರ್ಪಟ್ಟಿದ್ದು ಬೆಂಕಿ ಹೊತ್ತಿಕೊಂಡಿತ್ತು ಎನ್ನಲಾಗಿದೆ.

ಬಸ್​ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇನ್ನು ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

Advertisement
Tags :
Advertisement