For the best experience, open
https://m.newskannada.com
on your mobile browser.
Advertisement

ತಾಮ್ರದ ಗಣಿಯೊಳಗೆ ಸಿಲುಕಿದ್ದ 14 ಅಧಿಕಾರಿಗಳ ರಕ್ಷಣೆ

ಕೋಲಿಹಾನ್‌ನ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ ಗಣಿಯಲ್ಲಿ ಲಿಫ್ಟ್ ಹಗ್ಗ ಮುರಿದು ಗಣಿಯೊಳಗೆ ಸಿಲುಕಿಗೊಂಡಿದ್ದ 14 ಜನರನ್ನು ರಕ್ಷಿಸಲಾಗಿದೆ. ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು, ವಿಜಿಲೆನ್ಸ್‌ ತಂಡದ ಕನಿಷ್ಠ 14 ಜನರು ಗಣಿಯಲ್ಲಿ ಸಿಲುಕಿಕೊಂಡಿದ್ದರು.
09:40 AM May 15, 2024 IST | Ashitha S
ತಾಮ್ರದ ಗಣಿಯೊಳಗೆ ಸಿಲುಕಿದ್ದ 14 ಅಧಿಕಾರಿಗಳ ರಕ್ಷಣೆ

ಜೈಪುರ: ಕೋಲಿಹಾನ್‌ನ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ ಗಣಿಯಲ್ಲಿ ಲಿಫ್ಟ್ ಹಗ್ಗ ಮುರಿದು ಗಣಿಯೊಳಗೆ ಸಿಲುಕಿಗೊಂಡಿದ್ದ 14 ಜನರನ್ನು ರಕ್ಷಿಸಲಾಗಿದೆ. ಮಂಗಳವಾರ ತಡರಾತ್ರಿ ಘಟನೆ ನಡೆದಿದ್ದು, ವಿಜಿಲೆನ್ಸ್‌ ತಂಡದ ಕನಿಷ್ಠ 14 ಜನರು ಗಣಿಯಲ್ಲಿ ಸಿಲುಕಿಕೊಂಡಿದ್ದರು.

Advertisement

ಪಿಎಸ್‌ಯು ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ 14 ಅಧಿಕಾರಿಗಳು ಹಾಗೂ ವಿಜಿಲೆನ್ಸ್ ತಂಡದ ಸದಸ್ಯರಾಗಿದ್ದಾರೆ. ಮಂಗಳವಾರ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ .ಗಣಿ ಲಿಫ್ಟ್ ಕುಸಿತದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ, ಆದರೆ ಕೆಲವರ ಕೈ, ಇನ್ನು ಕೆಲವರ ಕಾಲು ಮುರಿದಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಲ್ಲರು ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಜುಂಜುನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಪ್ರವೀಣ್ ಶರ್ಮಾ ಅವರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

Advertisement

ಕಂಪನಿಯ ಹಿರಿಯ ಅಧಿಕಾರಿಗಳು ಮತ್ತು ಕಾರ್ಮಿಕರೊಂದಿಗೆ ವಿಜಿಲೆನ್ಸ್ ತಂಡವು ಪರಿಶೀಲನೆಗಾಗಿ ಗಣಿ ಒಳಗೆ ಹೋದ ಸಂದರ್ಭ ಘಟನೆ ನಡೆದಿದೆ.

Advertisement
Tags :
Advertisement