For the best experience, open
https://m.newskannada.com
on your mobile browser.
Advertisement

ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ 14 ವರ್ಷದ ಬಾಲಕಿಗೆ ಹೆರಿಗೆ

14 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.
01:20 PM Jan 10, 2024 IST | Ramya Bolantoor
ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ 14 ವರ್ಷದ ಬಾಲಕಿಗೆ ಹೆರಿಗೆ

ಚಿಕ್ಕಬಳ್ಳಾಪುರ: 14 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

Advertisement

ತುಮಕೂರು ಜಿಲ್ಲೆಯ ಮಧುಗಿರಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿದ್ದುಕೊಂಡು 9ನೇ ತರಗತಿ ಓದುತ್ತಿದ್ದಳು. ಈಕೆ ಗರ್ಭಿಣಿಯಾಗಿದ್ದು, ಈಗ ಹೆರಿಗೆಯಾಗಿದೆ. ಆದರೆ, ತನಗೆ ಹೀಗಾಗಿರುವ ವಿಚಾರವನ್ನು ಆಕೆ ಭಯದಿಂದ ಮುಚ್ಚಿಟ್ಟಿದ್ದಾಳೆ.

ಬಾಗೇಪಲ್ಲಿ ತಾಲೂಕಿನ ಕನ್ನಂಪಲ್ಲಿ ಗ್ರಾಮದಲ್ಲಿ ತಾಯಿ ಜತೆಗೆ ಇದ್ದಾಗ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ತಾಯಿಯು ಮಗಳನ್ನು   ಆಸ್ಪತ್ರೆಗೆ ಕರೆತಂದಿದ್ದಾರೆ. ಈಕೆಯನ್ನು ಪರೀಕ್ಷೆ ಮಾಡಿದ ವೈದ್ಯರು, ಇದು ಹೊಟ್ಟೆನೋವಲ್ಲ, ಹೆರಿಗೆ ನೋವು ಎಂದು ಹೇಳಿದ್ದಾರೆ. ಕೂಡಲೇ ಆಕೆಗೆ ಹೆರಿಗೆ ಮಾಡಿಸಲಾಗಿದೆ.ಮಗುವಿನ ತೂಕ 2.2 ಕೆಜಿ ಇದ್ದು, ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕಿಯ ಈ ಪರಿಸ್ಥಿತಿಗೆ ಕಾರಣವಾದವನಿಗಾಗಿ ಹುಡುಕಾಟ ನಡೆಸಲಾಗಿದೆ. ಈ ಬಗ್ಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

Advertisement

Advertisement
Tags :
Advertisement