ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಫೆ.29ರಿಂದ ಶುರುವಾಗಲಿದೆ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಕರ್ನಾಟಕ ಸರ್ಕಾರ ಆಯೋಜಿಸುವ ‘15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಉದ್ಘಾಟನಾ ಸಮಾರಂಭ ಫೆಬ್ರವರಿ 29ರಂದು ನಡೆಯಲಿದೆ.
07:50 PM Jan 19, 2024 IST | Ashika S

ಬೆಂಗಳೂರು: ಕರ್ನಾಟಕ ಸರ್ಕಾರ ಆಯೋಜಿಸುವ ‘15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ಉದ್ಘಾಟನಾ ಸಮಾರಂಭ ಫೆಬ್ರವರಿ 29ರಂದು ನಡೆಯಲಿದ್ದು, ಬ್ಯಾಂಕ್ವೆಟ್ ಹಾಲ್​ನಲ್ಲಿ ಮಾರ್ಚ್ 7ರಂದು ಸಮಾರೋಪ ಸಮಾರಂಭ ನಡೆಯಲಿದೆ.

Advertisement

ವಿಧಾನಸೌಧದ ಮುಂಭಾಗ ದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು,  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಏಷ್ಯನ್​​, ಭಾರತೀಯ ಮತ್ತು ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಬಾರಿಯ ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಹಲವು ವಿಶೇಷಗಳನ್ನು ಹೊಂದಿರಲಿದೆ. ಚಲನಚಿತ್ರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟದಿಂದ (FIAPF) ಬೆಂಗಳೂರು ಚಲನಚಿತ್ರೋತ್ಸವ ಮಾನ್ಯತೆ ಪಡೆದಿದೆ.

Advertisement

ಸಿನಿಮೋತ್ಸವ ನಡೆಯು ಸ್ಥಳ: ಬೆಂಗಳೂರಿನ ರಾಜಾಜಿನಗರದ ಒರಿಯಾನ್ ಮಾಲ್​ನ ‘ಪಿವಿಆರ್ ಸಿನಿಮಾ’ದ 11 ಪರದೆಗಳು, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ಇರುವ ಡಾ. ರಾಜ್​ಕುಮಾರ್​ ಭವನ ಮತ್ತು ಬನಶಂಕರಿ 2ನೇ ಹಂತದ ‘ಸುಚಿತ್ರಾ ಫಿಲ್ಮ್​ ಸೊಸೈಟಿ’ಯಲ್ಲಿ ಮಾರ್ಚ್ 1ರಿಂದ ಸಿನಿಮಾಗಳ ಪ್ರದರ್ಶನ ಆರಂಭವಾಗಲಿದೆ. ಅಂದಾಜು 50ಕ್ಕೂ ಹೆಚ್ಚು ದೇಶಗಳ 200ಕ್ಕೂ ಅಧಿಕ ಸಿನಿಮಾಗಳು ಬೇರೆ ಬೇರೆ ವಿಭಾಗಗಳಲ್ಲಿ ಪ್ರದರ್ಶನ ಆಗಲಿದೆ.

ಬೆಂಗಳೂರು ಚಲನಚಿತ್ರೋತ್ಸವದ ವಿಭಾಗಗಳು:
ಸ್ಪರ್ಧಾವಿಭಾಗ: ಇದರಲ್ಲಿ ಮೂರು ವಿಭಾಗಗಳು ಇವೆ. ​ಏಷ್ಯಾ ಸಿನಿಮಾ ವಿಭಾಗ, ಭಾರತೀಯ ಸಿನಿಮಾಗಳ ವಿಭಾಗ ಹಾಗೂ ​ಕನ್ನಡ ಸಿನಿಮಾ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ಉಳಿದಂತೆ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಮನರಂಜನಾ ಸಿನಿಮಾಗಳು, ವಿಮರ್ಶಕರ ವಾರ (ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಆಯ್ಕೆಯ ಸಿನಿಮಾಗಳು), ಬಯೋಪಿಕ್‌ಗಳು, ದೇಶ ಕೇಂದ್ರಿತ ಸಿನಿಮಾ, ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ಉಪ ಭಾಷೆಗಳಲ್ಲಿ ತಯಾರಾದ ಚಿತ್ರ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ.

ಪುನರಾವಲೋಕನ ವಿಭಾಗದಲ್ಲಿ ಮೃಣಾಲ್ ಸೇನ್ ಅವರ ಚಿತ್ರಗಳು ಪ್ರದರ್ಶನ ಆಗಲಿದೆ. ಶತಮಾನೋತ್ಸವ ನೆನಪು ಹಾಗೂ ಶ್ರದ್ಧಾಂಜಲಿ ವಿಭಾಗದಲ್ಲಿ ಸಂಗೀತ ನಿರ್ದೇಶಕ ವಿಜಯ್​ ಭಾಸ್ಕರ್‌, ನಟ ಸಾಬು ದಸ್ತಗೀರ್‌, ನಿರ್ದೇಶಕ ಭಗವಾನ್‌, ನಟಿ ಲೀಲಾವತಿ, ನಿರ್ಮಾಪಕ ಸಿ.ವಿ.ಶಿವಶಂಕ, ಗಾಯಕಿ ವಾಣಿ ಜಯರಾಂ ಮುಂತಾದವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಆಗಲಿದೆ.

‘ಕನ್ನಡ ಸಿನಿಮಾ 90’, ‘ಕರ್ನಾಟಕ 50’ ವಿಭಾಗದಲ್ಲಿ ಆಯ್ದ ಚಿತ್ರಗಳ ಪ್ರದರ್ಶನ ನಡೆಯಲಿದೆ. ಮಾನವ ಹಕ್ಕು ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವ ಸಾಕ್ಷ್ಯಚಿತ್ರಗಳ ವಿಭಾಗ ಕೂಡ ಇದೆ. ಈಗಾಗಲೇ ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಚಿತ್ರಗಳು ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಪ್ರದರ್ಶನವಾಗಲಿವೆ. www.biffes.org ಮೂಲಕ ಸಿನಿಮಾಗಳ ವಿವರ ಸಿಗಲಿದೆ.

ಚಿತ್ರೋತ್ಸವದಲ್ಲಿ ಭಾಗವಹಿಸಲು ಬಯಸುವ ಪ್ರತಿನಿಧಿಗಳ ನೋಂದಣಿ ಕಾರ್ಯ ಫೆಬ್ರವರಿ 15ರಿಂದ ಚಿತ್ರೋತ್ಸವದ ಜಾಲತಾಣದಲ್ಲಿ ಶುರುವಾಗಲಿದೆ.

ಸಾರ್ವಜನಿಕರಿಗೆ 800 ರೂಪಾಯಿ ಶುಲ್ಕ ಇದೆ. ಚಿತ್ರೋದ್ಯಮದ ಸದಸ್ಯರು, ಚಿತ್ರ ಸಮಾಜಗಳ ಸದಸ್ಯರು, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ 400 ರೂ. ಶುಲ್ಕವಿದೆ. ನೋಂದಣಿ ಸಹಾಯಕ್ಕೆ 080-23493410 ದೂರವಾಣಿ ಸಂಖ್ಯೆ ಹಾಗೂ biffesblr@gmail.com ಇ-ಮೇಲ್​ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Tags :
LatetsNewsNewsKannadaಉದ್ಘಾಟನಾ ಸಮಾರಂಭಚಲನಚಿತ್ರೋತ್ಸವಬೆಂಗಳೂರುಸರ್ಕಾರ
Advertisement
Next Article