For the best experience, open
https://m.newskannada.com
on your mobile browser.
Advertisement

ಬಲೂಚಿಸ್ತಾನ್  ಪ್ರಾಂತ್ಯದಲ್ಲಿ ರಸ್ತೆ ಅಪಘಾತ: 17 ಜನರ ದುರ್ಮರಣ

ರಸ್ತೆ ಅಪಘಾತವೊಂದರಲ್ಲಿ 17 ಯಾತ್ರಾರ್ಥಿಗಳು ಸಾವಿಗೀಡಾಗಿದ್ದು, 41 ಮಂದಿ ಗಾಯಗೊಂಡ ಘಟನೆ ಬಲೂಚಿಸ್ತಾನ್  ಪ್ರಾಂತ್ಯದಲ್ಲಿ ನಡೆದಿದೆ. 
02:59 PM Apr 11, 2024 IST | Ashika S
ಬಲೂಚಿಸ್ತಾನ್  ಪ್ರಾಂತ್ಯದಲ್ಲಿ ರಸ್ತೆ ಅಪಘಾತ  17 ಜನರ ದುರ್ಮರಣ

ಇಸ್ಲಾಮಾಬಾದ್:  ರಸ್ತೆ ಅಪಘಾತವೊಂದರಲ್ಲಿ 17 ಯಾತ್ರಾರ್ಥಿಗಳು ಸಾವಿಗೀಡಾಗಿದ್ದು, 41 ಮಂದಿ ಗಾಯಗೊಂಡ ಘಟನೆ ಬಲೂಚಿಸ್ತಾನ್  ಪ್ರಾಂತ್ಯದಲ್ಲಿ ನಡೆದಿದೆ.

Advertisement

ಈದ್ ಅಲ್-ಫಿತರ್  ರಜೆಯ ಹಿನ್ನೆಲೆಯಲ್ಲಿ ನೈರುತ್ಯ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕೇಂದ್ರವೊಂದಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಟ್ರಕ್ ಮಿತಿಮೀರಿದ ವೇಗದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಈ ಅವಘಡ ಸಂಭವಿಸಿದೆ. ಚಾಲಕ ಟ್ರಕ್‍ನಿಂದ ಜಿಗಿದಿದ್ದು, ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 17 ಜನರ ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Tags :
Advertisement