For the best experience, open
https://m.newskannada.com
on your mobile browser.
Advertisement

ಉಕ್ರೇನ್​ ಮೇಲೆ ರಷ್ಯಾದ ದಾಳಿ: 17 ಮಂದಿ ಸಾವು

ಉಕ್ರೇನಿಯನ್ ನಗರಗಳ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ. ಉತ್ತರ ಉಕ್ರೇನ್​ ನಗರವಾದ ಚೆರ್ನಿಹಿವ್ ಅನ್ನುಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. 
08:40 AM Apr 18, 2024 IST | Ashika S
ಉಕ್ರೇನ್​ ಮೇಲೆ ರಷ್ಯಾದ ದಾಳಿ  17 ಮಂದಿ ಸಾವು

ಉಕ್ರೇನ್: ಉಕ್ರೇನಿಯನ್ ನಗರಗಳ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ. ಉತ್ತರ ಉಕ್ರೇನ್​ ನಗರವಾದ ಚೆರ್ನಿಹಿವ್ ಅನ್ನುಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ.

Advertisement

ಈ ದಾಳಿಯಲ್ಲಿ ಕನಿಷ್ಠ 17 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ನಾಗರಿಕ ಮೂಲಸೌಕರ್ಯ ಮತ್ತು ಆಸ್ಪತ್ರೆಗೆ ಹಾನಿಯಾಗಿದೆ.

ಚೆರ್ನಿವ್‌ನ ಹಂಗಾಮಿ ಮೇಯರ್ ಒಲೆಕ್ಸಾಂಡರ್ ಲೋಮಿಕೊ ಅವರು ಬುಧವಾರ ಬೆಳಿಗ್ಗೆ 9 ಗಂಟೆಯ ನಂತರ ನಗರದ ಜನನಿಬಿಡ ಪ್ರದೇಶದಲ್ಲಿ ಮೂರು ಪ್ರಬಲ ಸ್ಫೋಟಗಳು ಸಂಭವಿಸಿವೆ ಎಂದು ಹೇಳಿದರು. ಇದರಿಂದಾಗಿ ಬಹುಮಹಡಿ ಕಟ್ಟಡ ಕುಸಿದಿದೆ.

Advertisement

ದಾಳಿಯಲ್ಲಿ ರಷ್ಯಾ ಮೂರು ಇಸ್ಕಾಂಡರ್ ಕ್ರೂಸ್ ಕ್ಷಿಪಣಿಗಳನ್ನು ಬಳಸಿದೆ ಎಂದು ಹೇಳಿದರು. ನಮ್ಮ ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾದ ಇತ್ತೀಚಿನ ವಾಯು ದಾಳಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ ಏಕೆಂದರೆ ನಮ್ಮಲ್ಲಿ ಕ್ಷಿಪಣಿಗಳಿಲ್ಲ ಎಂದರು.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಶ್ಚಿಮಾತ್ಯ ದೇಶಗಳಿಗೆ ದಾಳಿಯ ಗಂಟೆಗಳ ನಂತರ ಶಸ್ತ್ರಾಸ್ತ್ರಗಳನ್ನು ಪೂರೈಸಲು ಕರೆ ನೀಡಿದರು.

ಟ್ರಿಪಿಲ್ಸ್ಕಾ ವಿದ್ಯುತ್ ಸ್ಥಾವರವನ್ನು ಗುರಿಯಾಗಿಟ್ಟುಕೊಂಡು ರಷ್ಯಾ 11 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅವರು ಹೇಳಿದರು. ನಾವು ಮೊದಲ ಏಳು ಕ್ಷಿಪಣಿಗಳನ್ನು ನಾಶಪಡಿಸಿದ್ದೇವೆ, ಆದರೆ ನಂತರದ ಕ್ಷಿಪಣಿಗಳು ಎಲ್ಲವನ್ನು ಸಂಪೂರ್ಣವಾಗಿ ನಾಶಪಡಿಸಿದವು.

Advertisement
Tags :
Advertisement