ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏರಿದ ಬಿಸಿಲಿನ ಬೇಗೆ : 11 ದಿನದಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟ

ಈ ಬಾರಿ ಬಿಸಿಲಿನ ತಾಪಮಾನ ಎಂದಿಗಿಂತಾ ಅಧಿಕ ತಾಪಮಾನ ವರದಿಯಾಗಿದೆ. ಅಲ್ಲದೇ ಜನರು  ಬಿಸಿಲಿನ ಧಗೆಯಲ್ಲಿ ಹಿಂಡಿ ಇಪ್ಪೆಯಂತೆ ಆಗಿದ್ದಾರೆ. ಈ ಬಿಸಿಲಿನ ಹೊಡೆತಕ್ಕೆ ಸಿಲುಕಿದ ಜನ ಹೆಚ್ಚಾಗಿ ತಂಪುಪಾನೀಯಕ್ಕೆ ಮೊರೆ ಹೋಗುತ್ತಾರೆ ಇನ್ನು ಕೆಲವರು ಅಂದರೆ ಮದ್ಯಪ್ರಿಯರು ಕೋಲ್ಡ್‌ ಬಿಯರ್‌ನ ಮೊರೆ ಹೋಗಿದ್ದಾರೆ ವಿಷೇಶ ಎಂಬಂತೆ ಈ ತಿಂಗಳು ಬಿಯರ್‌ ಮಾರಾಟ ದಾಖಲೆ ಬರೆದಿದೆ. ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದು ಕಳೆದ ವರ್ಷಕ್ಕಿಂತ ಹೆಚ್ಚು ಮಾರಾಟವಾಗಿದೆ.
03:52 PM Apr 16, 2024 IST | Nisarga K
ಏರಿದ ಬಿಸಿಲಿನ ಬೇಗೆ : 11 ದಿನದಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟ

ಬೆಂಗಳೂರು:  ಈ ಬಾರಿ ಬಿಸಿಲಿನ ತಾಪಮಾನ ಎಂದಿಗಿಂತಾ ಅಧಿಕ ತಾಪಮಾನ ವರದಿಯಾಗಿದೆ. ಅಲ್ಲದೇ ಜನರು  ಬಿಸಿಲಿನ ಧಗೆಯಲ್ಲಿ ಹಿಂಡಿ ಇಪ್ಪೆಯಂತೆ ಆಗಿದ್ದಾರೆ. ಈ ಬಿಸಿಲಿನ ಹೊಡೆತಕ್ಕೆ ಸಿಲುಕಿದ ಜನ ಹೆಚ್ಚಾಗಿ ತಂಪುಪಾನೀಯಕ್ಕೆ ಮೊರೆ ಹೋಗುತ್ತಾರೆ ಇನ್ನು ಕೆಲವರು ಅಂದರೆ ಮದ್ಯಪ್ರಿಯರು ಕೋಲ್ಡ್‌ ಬಿಯರ್‌ನ ಮೊರೆ ಹೋಗಿದ್ದಾರೆ ವಿಷೇಶ ಎಂಬಂತೆ ಈ ತಿಂಗಳು ಬಿಯರ್‌ ಮಾರಾಟ ದಾಖಲೆ ಬರೆದಿದೆ. ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದು ಕಳೆದ ವರ್ಷಕ್ಕಿಂತ ಹೆಚ್ಚು ಮಾರಾಟವಾಗಿದೆ.

Advertisement

ರಾಜ್ಯದಲ್ಲಿ ಕಳೆದ 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿಯೂ ಏರಿಕೆಯಾಗಿದ್ದು, ದಾಖಲೆ ಬರೆದಿದೆ. 27 ಲಕ್ಷದ 18 ಸಾವಿರದ 461 ಬಾಟಲ್​ಗಳು ಮಾರಾಟವಾಗಿದ್ದರೆ ಇದರಿಂದ ಅಂದಾಜು 46 ಕೋಟಿ 21 ಲಕ್ಷ 38 ಸಾವಿರ 461 ರುಪಾಯಿ ಸರ್ಕಾರಕ್ಕೆ ಆದಾಯ ಬಂದಿದೆ. ಇನ್ನು ಈ ತಿಂಗಳ ಏಪ್ರಿಲ್ 1 ರಿಂದ ಏಪ್ರಿಲ್ 11ರ ವರೆಗೂ ಅಂದರೆ 11 ದಿನಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್ ವಿವಿಧ ಬ್ರ್ಯಾಂಡ್‌ನ ಬಿಯರ್ ಮಾರಾಟವಾಗಿವೆ.

ಇನ್ನೂ ಕಳೆದ ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಬೇಸಿಗೆಯ ಅವಧಿಯಲ್ಲಿ 8.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2022ರಲ್ಲಿ 9.20 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೇ, 2023 ರಲ್ಲಿ 13.16 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. 2023ಕ್ಕೆ ಹೋಲಿಸಿದರೆ ಈ ವರ್ಷ ಬರೋಬ್ಬರಿ 4.51 ಲಕ್ಷ ಲೀಟರ್ ಬಿಯರ್ ಹೆಚ್ಚು ಮಾರಾಟ ಆಗಿದೆ.

Advertisement

Advertisement
Tags :
beerbengaluruDRINKShighLatestNewsNewsKarnatakaRECORDSALEtemperature
Advertisement
Next Article