For the best experience, open
https://m.newskannada.com
on your mobile browser.
Advertisement

ಇಂದು ರಾಜ್ಯದಲ್ಲಿ 197 ಡೆಂಗ್ಯೂ ಪ್ರಕರಣ ಪತ್ತೆ: ಓರ್ವ ಮೃತ್ಯು

ರಾಜ್ಯದಲ್ಲಿ ಇಂದು 197 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 303ಕ್ಕೇರಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲೇ 95 ಮಂದಿಗೆ ಸೋಮವಾರ ಸೋಂಕು ತಗುಲಿದೆ.
09:43 PM Jul 08, 2024 IST | Chaitra Kulal
ಇಂದು ರಾಜ್ಯದಲ್ಲಿ 197 ಡೆಂಗ್ಯೂ ಪ್ರಕರಣ ಪತ್ತೆ  ಓರ್ವ ಮೃತ್ಯು

ಬೆಂಗಳೂರು: ರಾಜ್ಯದಲ್ಲಿ ಇಂದು 197 ಡೆಂಗ್ಯೂ ಕೇಸ್‌ಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 303ಕ್ಕೇರಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲೇ 95 ಮಂದಿಗೆ ಸೋಮವಾರ ಸೋಂಕು ತಗುಲಿದೆ.

Advertisement

ಸೋಂಕಿತರ ಪೈಕಿ 46 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ 892 ಮಂದಿಗೆ ಟೆಸ್ಟ್‌ ನಡೆಸಿದ್ದು, ಈ ಪೈಕಿ 197 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 95, ಬೆಂಗಳೂರು ನಗರ 4, ಶಿವಮೊಗ್ಗ 16, ವಿಜಯಪುರ, ಬಾಗಲಕೋಟೆ,

ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 3, ಕಲಬುರಗಿ 15, ಕೊಪ್ಪಳ 1, ಚಾಮರಾಜನಗರ 6, ಮಂಡ್ಯ 33, ಉಡುಪಿ 1, ಚಿಕ್ಕಮಗಳೂರು ಜಿಲ್ಲೆಯಲ್ಲಿ 17 ಮಂದಿಗೆ ಸೋಂಕು ತಗುಲಿದೆ. 197 ಮಂದಿಯಲ್ಲಿ 0-1 ವರ್ಷದೊಳಗಿನವರಲ್ಲಿ 1 ಮಗುವಿಗೆ, 1 ರಿಂದ 18 ವರ್ಷಗೊಳಗಿನ 63 ಮಂದಿಗೆ ಸೋಂಕು ತಗುಲಿದೆ.

Advertisement

Advertisement
Tags :
Advertisement