For the best experience, open
https://m.newskannada.com
on your mobile browser.
Advertisement

20 ಪ್ರಿಯಕರರಿಂದ 20 ಐಫೋನ್ ಗಿಫ್ಟ್​​​​​; ಫೋನ್​​ ಮಾರಿ ಮನೆ ಖರೀದಿಸಿದ ಯುವತಿ

ಯುವತಿಯೊಬ್ಬಳು 20 ಪ್ರಿಯಕರರಿಂದ 20 ಐಫೋನ್​​​ ಗಿಫ್ಟ್ ಪಡೆದು ಬಳಿಕ ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿ ಸುದ್ದಿಯಾಗಿದ್ದಾಳೆ. ಹೌದು. . ಈ ಘಟನೆ ಚೀನಾದಲ್ಲಿ ನಡೆದಿದೆ.
02:02 PM Jul 09, 2024 IST | Ashitha S
20 ಪ್ರಿಯಕರರಿಂದ 20 ಐಫೋನ್ ಗಿಫ್ಟ್​​​​​  ಫೋನ್​​ ಮಾರಿ ಮನೆ ಖರೀದಿಸಿದ ಯುವತಿ

ಚೀನಾ: ಯುವತಿಯೊಬ್ಬಳು 20 ಪ್ರಿಯಕರರಿಂದ 20 ಐಫೋನ್​​​ ಗಿಫ್ಟ್ ಪಡೆದು ಬಳಿಕ ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿ ಸುದ್ದಿಯಾಗಿದ್ದಾಳೆ. ಹೌದು. . ಈ ಘಟನೆ ಚೀನಾದಲ್ಲಿ ನಡೆದಿದೆ.

Advertisement

ಚೀನಾದ ಮೂಲದ ಈ ಯುವತಿಯ ಹೆಸರು Xiaoli. ಸದ್ಯ ಈಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್​​ಗಳು ಹರಿದಾಡುತ್ತಿದೆ. ವಾಸ್ತವವಾಗಿ ಈ ಘಟನೆ 2016ರಲ್ಲಿ ನಡೆದಿದೆ. @tech_grammm ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈಕೆಯ ಕುರಿತು ಹಾಕಲಾದ ಫೋಸ್ಟ್​ ಒಂದು ಸದ್ಯ ಎಲ್ಲೆಡೆ ವೈರಲ್​​ ಆಗಿದೆ.

ಬಡ ಕುಟುಂಬದಿಂದ ಬಂದ ಈಕೆ ಸ್ವಂತ ಮನೆ ಖರೀದಿಸಲು ಈ ರೀತಿ ಪ್ಲ್ಯಾನ್​ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ತನ್ನ ಎಲ್ಲ ಐಫೋನ್​​ಗಳನ್ನು ಭಾರತದ ಕರೆನ್ಸಿಯ ಅಂದಾಜಿನ ಪ್ರಕಾರ 14 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಿ ಡೌನ್​​ ಪೇಮೆಂಟ್​​ನಲ್ಲಿ ಹೊಸ ಮನೆ ಖರೀದಿಸಿದ್ದಾಳೆ ಎಂದು ತಿಳಿದು ಬಂದಿದೆ.

Advertisement

Advertisement
Tags :
Advertisement