ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೂರು ರಾಜ್ಯಗಳಲ್ಲಿ ಕೋವಿಡ್‌ ಹೊಸ ತಳಿ ಜೆಎನ್‌.1ನ 20 ಕೇಸ್ ಪತ್ತೆ

ಮೂರು ರಾಜ್ಯಗಳಲ್ಲಿ ಕೋವಿಡ್‌ ಹೊಸ ತಳಿ ಜೆಎನ್‌.1 ಪತ್ತೆಯಾಗಿದೆ. ಗೋವಾದಲ್ಲಿ 18, ಕೇರಳ ಮತ್ತು ಕರ್ನಾಟಕದಲ್ಲಿ ತಲಾ ಒಂದು ಹೊಸ ಪ್ರಕರಣ ಸೇರಿ ಒಟ್ಟು 20 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು INSACOG (ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ) ಅಂಕಿ ಅಂಶ ತಿಳಿಸಿದೆ.
04:05 PM Dec 20, 2023 IST | Ashitha S

ವದೆಹಲಿ: ಮೂರು ರಾಜ್ಯಗಳಲ್ಲಿ ಕೋವಿಡ್‌ ಹೊಸ ತಳಿ ಜೆಎನ್‌.1 ಪತ್ತೆಯಾಗಿದೆ. ಗೋವಾದಲ್ಲಿ 18, ಕೇರಳ ಮತ್ತು ಕರ್ನಾಟಕದಲ್ಲಿ ತಲಾ ಒಂದು ಹೊಸ ಪ್ರಕರಣ ಸೇರಿ ಒಟ್ಟು 20 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು INSACOG (ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ) ಅಂಕಿ ಅಂಶ ತಿಳಿಸಿದೆ.

Advertisement

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಕೇಂದ್ರ ಸರ್ಕಾರ ನಿರಂತರವಾಗಿ ಎಚ್ಚರಿಕೆಯಿಂದಿರಲು ಮಾರ್ಗಸೂಚಿ ಬಿಡುಗಡೆ ಮಾಡಿದೆ. ದೇಶದಲ್ಲಿ ಇಂದು ಹೊಸದಾಗಿ 614 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,311ಕ್ಕೆ ಏರಿಕೆಯಾಗಿದೆ. ಮೇ 21 ರಿಂದ ಈವರೆಗೆ ದೃಢಪಟ್ಟ ಅತಿ ಹೆಚ್ಚು ದೈನಂದಿನ ಪ್ರಕರಣ ಇದಾಗಿದೆ.

ಜೆಎನ್‌.1 ಸೋಂಕು ಹರಡುವಿಕೆ ವೇಗವಾಗಿದೆ, ಆದರೆ ಜಾಗತಿಕವಾಗಿ ಆರೋಗ್ಯದ ಮೇಲಿನ ಅಪಾಯ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Advertisement

Advertisement
Tags :
20 casesCOVID 19GOVERNMENTindiaKARNATAKALatestNewsNewsKannadaಜೆಎನ್‌.1ನವದೆಹಲಿಬೆಂಗಳೂರು
Advertisement
Next Article