ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಸ್ಸೊಂದು ನದಿ ಕಣಿವೆಗೆ ಉರುಳಿ 20 ಪ್ರಯಾಣಿಕರು ಮೃತ್ಯು

ಪ್ರಯಾಣಿಕರ ಬಸ್ಸೊಂದು ಬೆಟ್ಟ ಪ್ರದೇಶದಲ್ಲಿ ಚಲಿಸುವಾಗ ನದಿ ಕಣಿವೆಗೆ ಉರುಳಿ ಕನಿಷ್ಠ 20 ಜನ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದಲ್ಲಿ ಇಂದು ನಡೆದಿದೆ.
02:48 PM May 03, 2024 IST | Chaitra Kulal

ಪಾಕಿಸ್ತಾನ: ಪ್ರಯಾಣಿಕರ ಬಸ್ಸೊಂದು ಬೆಟ್ಟ ಪ್ರದೇಶದಲ್ಲಿ ಚಲಿಸುವಾಗ ನದಿ ಕಣಿವೆಗೆ ಉರುಳಿ ಕನಿಷ್ಠ 20 ಜನ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದಲ್ಲಿ ಇಂದು ನಡೆದಿದೆ.

Advertisement

ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯದ ದಿಯಾಮೇರ್ ಜಿಲ್ಲೆಯ ಕಾರಕೊರಂ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದು 15 ಜನ ಗಾಯಗೊಂಡಿದ್ದಾರೆ.

ನತದೃಷ್ಟ ಬಸ್ ರಾವಲ್ಪಿಂಡಿಯಿಂದ ಹುಂಜಾಗೆ ತೆರಳುತಿತ್ತು. ಕಾರಕೊರಂನ ಚಿಲ್ಲಾಸ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಣಿವೆಗೆ ಉರುಳಿತ್ತು.

Advertisement

ಘಟನೆಗೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯದ ಮುಖ್ಯಮಂತ್ರಿ ಹಾಜಿ ಗುಲ್ಬರ್ ಖಾನ್ ಅವರು ಚಿಲ್ಲಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿಯಾಗಿದ್ದಾರೆ.

Advertisement
Tags :
BUSDIEDLatestNewsNewsKarnatakapassengers
Advertisement
Next Article