For the best experience, open
https://m.newskannada.com
on your mobile browser.
Advertisement

ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ; 25 ಮಂದಿ ಸಾವು !

ಅಫ್ಘಾನಿಸ್ತಾನದಲ್ಲಿ ಉಂಟಾದ ಭಾರೀ ಪ್ರಮಾಣದ ಹಿಮಪಾತದಿಂದ ಭೂಕುಸಿತ ಉಂಟಾಗಿ 25 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.
08:14 AM Feb 20, 2024 IST | Ashitha S
ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ  25 ಮಂದಿ ಸಾವು

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ಉಂಟಾದ ಭಾರೀ ಪ್ರಮಾಣದ ಹಿಮಪಾತದಿಂದ ಭೂಕುಸಿತ ಉಂಟಾಗಿ 25 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.

Advertisement

ಪಾಕಿಸ್ತಾನದ ಗಡಿಯಲ್ಲಿರುವ ನುರಿಸ್ತಾನ್ ಪ್ರಾಂತ್ಯವು ಹೆಚ್ಚಾಗಿ ಪರ್ವತ ಕಾಡುಗಳಿಂದ ಆವೃತವಾಗಿದೆ ಮತ್ತು ಹಿಂದೂ ಕುಶ್ ಪರ್ವತ ಶ್ರೇಣಿಯ ದಕ್ಷಿಣ ತುದಿಯನ್ನು ತಲುಪುತ್ತದೆ. ಹೀಗಾಗಿ ನುರಿಸ್ತಾನ್​ನ ಟಾಟಿನ್​ ಕಣಿವೆಯ ನಕ್ರೆ ಗ್ರಾಮದಲ್ಲಿ ಹಿಮಪಾತ ಆವರಿಸಿದೆ.

ಈ ವೇಳೆ ಭೂಕುಸಿತ ಉಂಟಾಗಿದ್ದು, ಸುಮಾರು 20 ಮನೆಗಳು ಸಂಪೂರ್ಣ ನಾಶವಾಗಿವೆ. ಇನ್ನು ಹಿಮಪಾತ ಹೆಚ್ಚಾಗುವುದರ ಜೊತೆಗೆ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

ಮೋಡ, ಮಳೆಯಿಂದಾಗಿ ಹೆಲಿಕಾಪ್ಟರ್​ ನುರಿಸ್ತಾನ್​​ನಲ್ಲಿ ಇಳಿಯಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ. ಅತ್ತ ಹಿಮವು ಆವರಿಸಿದ್ದ ಕಾರಣ ರಕ್ಷಣೆಗಾಗಿ ಮುಖ್ಯ ರಸ್ತೆಗಳಲ್ಲು ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಪ್ಘಾನಿಸ್ತಾನ ವಿಶ್ವದ ಅತ್ಯಂತ ಬಡ ದೇಶವಾಗಿದೆ. ಹಿಂದಿನ ಯುದ್ಧಗಳಿಂದಾಗಿ ನಲುಗಿ ಹೋಗಿವೆ. ಅದರ ಜೊತೆಗೆ ನೈಸರ್ಗಿಕ ವಿಕೋಪವನ್ನು ಎದುರಿಸುತ್ತಾ ಕಷ್ಟದ ಜೀವನ ನಡೆಸುತ್ತಿದೆ.

Advertisement
Tags :
Advertisement