For the best experience, open
https://m.newskannada.com
on your mobile browser.
Advertisement

ಪರವಾನಗಿ ಇಲ್ಲದೆ ನಡೆಸುತ್ತಿದ್ದ ಚಿಲ್ಡ್ರನ್ ಹೋಮ್​​ನಿಂದ  26 ಹುಡುಗಿಯರು ನಾಪತ್ತೆ

ಪರವಾನಗಿ ಇಲ್ಲದೆ ನಡೆಸುತ್ತಿದ್ದ ಚಿಲ್ಡ್ರನ್ ಹೋಮ್​​ನಿಂದ  26 ಹುಡುಗಿಯರು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಭೋಪಾಲ್‌ನಲ್ಲಿ ನಡೆದಿದೆ.
06:39 PM Jan 06, 2024 IST | Ashika S
ಪರವಾನಗಿ ಇಲ್ಲದೆ ನಡೆಸುತ್ತಿದ್ದ ಚಿಲ್ಡ್ರನ್ ಹೋಮ್​​ನಿಂದ  26 ಹುಡುಗಿಯರು ನಾಪತ್ತೆ

ಭೋಪಾಲ್: ಪರವಾನಗಿ ಇಲ್ಲದೆ ನಡೆಸುತ್ತಿದ್ದ ಚಿಲ್ಡ್ರನ್ ಹೋಮ್​​ನಿಂದ  26 ಹುಡುಗಿಯರು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

Advertisement

ಘಟನೆಯ ಬಗ್ಗೆ ಮಧ್ಯಪ್ರದೇಶದ  ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ , ರಾಜ್ಯ ಸರ್ಕಾರವು ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಭೋಪಾಲ್‌ನ ಪರ್ವಾಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಚಿಲ್ಡ್ರನ್ ಹೋಮ್​​ನಿಂದ 26 ಹುಡುಗಿಯರು ನಾಪತ್ತೆಯಾದ ಪ್ರಕರಣವು ನನ್ನ ಗಮನಕ್ಕೆ ಬಂದಿದೆ. ವಿಷಯದ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಪರಿಗಣಿಸಿ, ಸರ್ಕಾರವು ಗಮನಹರಿಸಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

ಏತನ್ಮಧ್ಯೆ, ಭೋಪಾಲ್‌ನ ಪರ್ವಾಲಿಯಾ ಸಡಕ್ ಪೊಲೀಸ್ ಠಾಣೆಯು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಮಕ್ಕಳ ರಕ್ಷಣೆ) ಕಾಯಿದೆ, 2015 ರ ಸೆಕ್ಷನ್‌ಗಳ ಅಡಿಯಲ್ಲಿ ಚಿಲ್ಡ್ರನ್ ಹೋಮ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಆರೋಪಿ ವ್ಯಕ್ತಿಯನ್ನು ಚಿಲ್ಡ್ರನ್ ಹೋಮ್ ವ್ಯವಸ್ಥಾಪಕ ಅನಿಲ್ ಮೆಥ್ಯೂ ಎಂದು ಹೆಸರಿಸಿದ್ದಾರೆ. ಚಿಲ್ಡ್ರನ್ ಹೋಮ್ ನಲ್ಲಿದ್ದ 68 ಬಾಲಕಿಯಲ್ಲಿ 26 ಮಂದಿ ಕಾಣೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Tags :
Advertisement