ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

26/11ರ ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ

ಮುಂಬೈ: ಹದಿನೈದು ವರ್ಷಗಳ ಹಿಂದೆ ಈ ದಿನ (26‌‌ ‌‌\11) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 166 ಜನ ಮೃತಪಟ್ಟಿದ್ದರು. 10 ಭಯೋತ್ಪಾದಕರ ಗುಂಪಿನ ಈ ಸಂಘಟಿತ ದಾಳಿ ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಸಂಚಲನ ಮೂಡಿಸಿತ್ತು.
10:04 AM Nov 26, 2023 IST | Ashitha S

ಮುಂಬೈ: ಹದಿನೈದು ವರ್ಷಗಳ ಹಿಂದೆ ಈ ದಿನ (26‌‌ ‌‌\11) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 166 ಜನ ಮೃತಪಟ್ಟಿದ್ದರು. 10 ಭಯೋತ್ಪಾದಕರ ಗುಂಪಿನ ಈ ಸಂಘಟಿತ ದಾಳಿ ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಸಂಚಲನ ಮೂಡಿಸಿತ್ತು.

Advertisement

2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಪಾಕಿಸ್ತಾನದ 10 ಭಯೋದ್ಪಾದಕರು ದಕ್ಷಿಣ ಮುಂಬೈ ಪ್ರದೇಶಗಳನ್ನು ಪ್ರವೇಶಿಸಿದರು. ಚಾಬಾದ್ ಹೌಸ್ ಮತ್ತು ಯಹೂದಿ ಕೇಂದ್ರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿದರು. ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಮೃತಪಟ್ಟಿದ್ದರು.

ಈ ವೇಳೆ 60 ಗಂಟೆ ಕಾರ್ಯಾಚರಣೆ ನಡೆದಿತ್ತು. ಘಟನೆಯಲ್ಲಿ ಒಂಬತ್ತು ಉಗ್ರರನ್ನು ಹತರಾಗಿದ್ದರು. ದಾಳಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್ ಕಸಬ್‌ನನ್ನು 2021ರ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.

Advertisement

'ಲಷ್ಕರ್-ಎ-ತಯ್ಬಾ ಮಾರಣಾಂತಿಕ ಮತ್ತು ಖಂಡನೀಯ ಭಯೋತ್ಪಾದಕ ಸಂಘಟನೆಯಾಗಿದ್ದು, ನೂರಾರು ಭಾರತೀಯ ನಾಗರಿಕರ ಹತ್ಯೆಗೆ ಮತ್ತು ಇತರರ ಹತ್ಯೆಗೆ ಕಾರಣವಾಗಿದೆ. 2008ರ ನವೆಂಬರ್ 26ರಂದು ಸಂಘಟನೆ ನಡೆಸಿದ ಹೇಯ ಕೃತ್ಯವು ಶಾಂತಿಯನ್ನು ಬಯಸುವ ಎಲ್ಲಾ ರಾಷ್ಟ್ರಗಳು ಮತ್ತು ಸಮಾಜಗಳಲ್ಲಿ ಇನ್ನೂ ಹಸಿರಾಗಿದೆ' ಎಂದು ಹೇಳಿಕೆ ಸೇರಿಸಿದೆ.

ಇನ್ನು ಮಹತ್ತರ ಬೆಳವಣಿಗೆಯಲ್ಲಿ ತನ್ನ ದೇಶದಲ್ಲಿ ಹತ್ಯಾಕಾಂಡ ನಡೆಸಿರುವ ಹಮಾಸ್ ಅನ್ನು ಮಟ್ಟ ಹಾಕಲು ಇಸ್ರೇಲ್ ಗಾಜಾದಲ್ಲಿ ಉಗ್ರ ಹೋರಾಟ ನಡೆಸುತ್ತಿರುವುದು ಗೊತ್ತೇ ಇದೆ. ಅದೇ ಸಮಯದಲ್ಲಿ, ಇಸ್ರೇಲ್ ರಾಯಭಾರಿ ಇತ್ತೀಚೆಗೆ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಭಾರತವನ್ನು ಕೇಳಿಕೊಂಡಿತ್ತು. ಇದಾದ ಕೆಲವು ದಿನಗಳ ನಂತರ, ಲಷ್ಕರ್-ಎ-ತೊಯ್ಬಾವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ನಿರ್ಧಾರ ತೆಗೆದುಕೊಂಡಿದೆ.

ನಾವು ಲಷ್ಕರ್-ಎ-ತೊಯ್ಬಾವನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಿದ್ದೇವೆ. ಇದಕ್ಕಾಗಿ ಭಾರತ ಸರ್ಕಾರದಿಂದ ಯಾವುದೇ ಮನವಿ ಬಂದಿಲ್ಲವಾದರೂ ಇಸ್ರೇಲ್ ಈ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದೇವೆ. ಲಷ್ಕರ್-ಎ-ತೊಯ್ಬಾ ಭಯಾನಕ ಭಯೋತ್ಪಾದಕ ಸಂಘಟನೆಯಾಗಿದೆ. ಈ ಸಂಘಟನೆ ಭಾರತೀಯ ನಾಗರಿಕರ ಜೊತೆಗೆ ನೂರಾರು ಜನರನ್ನು ಅಪಹರಿಸಲಾಗಿದೆ. ನವೆಂಬರ್ 26, 2008 ರಂದು ಈ ಸಂಘಟನೆಯ ಭಯೋತ್ಪಾದನೆ ಇನ್ನೂ ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತಿದೆ " ಎಂದು ಇಸ್ರೇಲಿ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

Advertisement
Tags :
26/11anniversaryGOVERNMENTindiaLatestNewsMUMBAINewsKannadaನವದೆಹಲಿಬೆಂಗಳೂರು
Advertisement
Next Article