For the best experience, open
https://m.newskannada.com
on your mobile browser.
Advertisement

ರಷ್ಯಾದ 2ನೇ ಸೇನಾ ವಿಮಾನ ಪತನ: 15 ಯೋಧರು ಸಾವು !

ರಷ್ಯಾ ಸೇನೆಗೆ ಸೇರಿದ ವಿಮಾನವೊಂದು ಮತ್ತೊಮ್ಮೆ ಭೀಕರ ದುರಂತಕ್ಕೀಡಾಗಿದೆ. ಮಾಸ್ಕೋದ ಇವನೊವೊ ಪ್ರದೇಶದಲ್ಲಿ ಸೇನಾ ವಿಮಾನ ಪತನವಾಗಿದ್ದು, 15 ಮಂದಿ ಯೋಧರು ಸಾವನ್ನಪ್ಪಿದ್ದಾರೆ. ಸೇನಾ ವಿಮಾನ ಆಕಾಶದಲ್ಲಿ ಹಾರಾಡುತ್ತಿರುವಾಗಲೇ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಮಾಸ್ಕೋ ಸಿಟಿಗೆ 200 ಕಿಲೋ ಮೀಟರ್‌ ದೂರದ ಈಶಾನ್ಯ ಇವನೊವೊ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ರಷ್ಯಾ ಸೇನಾ ವಿಮಾನ ಪತನವಾಗುತ್ತಿರುವ ಲೈವ್ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
09:24 PM Mar 12, 2024 IST | Ashitha S
ರಷ್ಯಾದ 2ನೇ ಸೇನಾ ವಿಮಾನ ಪತನ  15 ಯೋಧರು ಸಾವು

ರಷ್ಯಾ ಸೇನೆಗೆ ಸೇರಿದ ವಿಮಾನವೊಂದು ಮತ್ತೊಮ್ಮೆ ಭೀಕರ ದುರಂತಕ್ಕೀಡಾಗಿದೆ. ಮಾಸ್ಕೋದ ಇವನೊವೊ ಪ್ರದೇಶದಲ್ಲಿ ಸೇನಾ ವಿಮಾನ ಪತನವಾಗಿದ್ದು, 15 ಮಂದಿ ಯೋಧರು ಸಾವನ್ನಪ್ಪಿದ್ದಾರೆ. ಸೇನಾ ವಿಮಾನ ಆಕಾಶದಲ್ಲಿ ಹಾರಾಡುತ್ತಿರುವಾಗಲೇ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಮಾಸ್ಕೋ ಸಿಟಿಗೆ 200 ಕಿಲೋ ಮೀಟರ್‌ ದೂರದ ಈಶಾನ್ಯ ಇವನೊವೊ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ರಷ್ಯಾ ಸೇನಾ ವಿಮಾನ ಪತನವಾಗುತ್ತಿರುವ ಲೈವ್ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ರಷ್ಯಾದ IL-76 ಸೇನಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆಗೆ ತುತ್ತಾದ ವಿಮಾನ ನೋಡ, ನೋಡುತ್ತಿದ್ದಂತೆ ನೆಲಕ್ಕಪ್ಪಳಿಸಿದೆ. ರಷ್ಯಾ ಸೇನಾ ಸಚಿವಾಲಯ 15 ಯೋಧರು ದುರಂತದಲ್ಲಿ ಸಾವನ್ನಪ್ಪಿರೋದನ್ನ ಖಚಿತಪಡಿಸಿದ್ದಾರೆ. ಕಳೆದ ತಿಂಗಳು ರಷ್ಯಾದ ಮಿಲಿಟರಿ ವಿಮಾನವೊಂದು ಇದೇ ರೀತಿ ಪತನವಾಗಿತ್ತು. ಉಕ್ರೇನ್‌ ಯುದ್ಧದಲ್ಲಿ ಬಂಧಿಸಲಾದ 65 ಕೈದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನವಾಗಿತ್ತು. ರಷ್ಯಾದ 6 ಸೇನಾ ಸಿಬ್ಬಂದಿಗಳು ಸೇರಿ 65 ಉಕ್ರೇನ್‌ ಕೈದಿಗಳು ದುರಂತದಲ್ಲಿ ಸಾವನ್ನಪ್ಪಿದ್ದರು. ಇದಾದ 1 ತಿಂಗಳ ಬಳಿಕ ಅದೇ ರೀತಿಯಲ್ಲಿ ರಷ್ಯಾ ಸೈನಿಕರಿದ್ದ ವಿಮಾನ ಪತನವಾಗಿದೆ.

Advertisement

Advertisement
Tags :
Advertisement