For the best experience, open
https://m.newskannada.com
on your mobile browser.
Advertisement

ಇಂದು ದ್ವಿತೀಯ ಪಿಯುಸಿ ರಿಸಲ್ಟ್; ಫಲಿತಾಂಶ ಎಷ್ಟು ಗಂಟೆಗೆ ಪ್ರಕಟ?

ಇಂದು ದ್ವಿತೀಯ ಪಿಯು ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳಂತೂ ಈ ಬಗ್ಗೆ ಭಾರೀ ಕುತೂಹಲದಲ್ಲಿದ್ದು, ರಿಸಲ್ಟ್​ಗಾಗಿ ಕಾಯುತ್ತಿದ್ದಾರೆ.
08:48 AM Apr 10, 2024 IST | Ashitha S
ಇಂದು ದ್ವಿತೀಯ ಪಿಯುಸಿ ರಿಸಲ್ಟ್  ಫಲಿತಾಂಶ ಎಷ್ಟು ಗಂಟೆಗೆ ಪ್ರಕಟ

ಬೆಂಗಳೂರು: ಇಂದು ದ್ವಿತೀಯ ಪಿಯು ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳಂತೂ ಈ ಬಗ್ಗೆ ಭಾರೀ ಕುತೂಹಲದಲ್ಲಿದ್ದು, ರಿಸಲ್ಟ್​ಗಾಗಿ ಕಾಯುತ್ತಿದ್ದಾರೆ.

Advertisement

ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್​ 1ರಿಂದ 22ರವರೆಗೆ ನಡೆದಿತ್ತು. ಇದೀಗ ಏಪ್ರಿಲ್​ 10ರಂದು ಫಲಿತಾಂಶ ಹೊರಬೀಳಲಿದೆ. ಈ ಬಗ್ಗೆ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದೆ. 11 ಗಂಟೆಯ ಬಳಿಕ ವೆಬ್​ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

https://karresults.nic.in ಜಾಲತಾಣದಲ್ಲಿ ಪರೀಕ್ಷಾ ಫಲಿತಾಂಶ ಸಿಗಲಿದೆ. 11 ಗಂಟೆ ಬಳಿಕ ವೆಬ್ ಸೈಟ್ ಅಲ್ಲಿ ರಿಸಲ್ಟ್ ನೋಡಲು ಅವಕಾಶವಿದೆ.

Advertisement

Advertisement
Tags :
Advertisement