For the best experience, open
https://m.newskannada.com
on your mobile browser.
Advertisement

ಬೋರ್​ವೆಲ್​ಗೆ ಬಿದ್ದ ಮಗು; ಸತತ ಕಾರ್ಯಾಚರಣೆ ಬಳಿಕ ಆಗಿದ್ದೇ ಬೇರೆ

ಬೋರ್​​ವೆಲ್​​ನಲ್ಲಿ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಗುಜರಾತ್​ನ ದ್ವಾರಕ ಜಿಲ್ಲೆಯ ರನ್ ಗ್ರಾಮದಲ್ಲಿ ನಡೆದಿದೆ.
10:06 PM Jan 02, 2024 IST | Ashitha S
ಬೋರ್​ವೆಲ್​ಗೆ ಬಿದ್ದ ಮಗು  ಸತತ ಕಾರ್ಯಾಚರಣೆ ಬಳಿಕ ಆಗಿದ್ದೇ ಬೇರೆ

ಗಾಂಧಿನಗರ: ಬೋರ್​​ವೆಲ್​​ನಲ್ಲಿ ಬಿದ್ದಿದ್ದ 3 ವರ್ಷದ ಬಾಲಕಿಯನ್ನು ರಕ್ಷಣೆ ಮಾಡಿದ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಗುಜರಾತ್​ನ ದ್ವಾರಕ ಜಿಲ್ಲೆಯ ರನ್ ಗ್ರಾಮದಲ್ಲಿ ನಡೆದಿದೆ.

Advertisement

ತೆರೆದ ಬೋರ್​​ವೆಲ್​ಗೆ​ ಬಿದ್ದಿದ್ದ ಏಂಜೆಲ್ ಸಖ್ರಾ 3 ವರ್ಷದ ಬಾಲಕಿ. ಮನೆಯ ಅಂಗಳದಲ್ಲಿ ಆಟವಾಡುತ್ತಿರುವಾಗ ಅಲ್ಲಿಯೇ ಇದ್ದ ತೆರೆದ ಬೋರ್‌ವೆಲ್‌ಗೆ ಬಾಲಕಿ ಬಿದ್ದಿದ್ದಳು. ಬಳಿಕ ಮಾಹಿತಿ ಎಲ್ಲ ಕಡೆ ಹಬ್ಬುತ್ತಿದ್ದಂತೆ ಜಿಲ್ಲಾಡಳಿತದಿಂದ ರಕ್ಷಣೆ ಕಾರ್ಯ ಕೈಗೊಳ್ಳಲಾಗಿತ್ತು. ಇದರಲ್ಲಿ ಇಂಡಿಯನ್ ಆರ್ಮಿ ಮತ್ತು ಎನ್​ಡಿಆರ್​​ಎಫ್, ಅಗ್ನಿಶಾಮಕ​ ಸಿಬ್ಬಂದಿ ಕೂಡ ಭಾಗಿಯಾಗಿದ್ದರು.

ಸತತ 8 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಮಾಡಿ ಸುಮಾರು 35 ಫೀಟ್ ಆಳಕ್ಕೆ ಬಿದ್ದಿದ್ದ ಬಾಲಕಿಯನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಆರೋಗ್ಯ ಸಿಬ್ಬಂದಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣ ಖಂಭಾಲಿಯಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್​​ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆಯೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Advertisement

Advertisement
Tags :
Advertisement