For the best experience, open
https://m.newskannada.com
on your mobile browser.
Advertisement

30.92 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ : ಐವರ ಬಂಧನ

ಲೋಕಸಬಾ ಚುನಾವಣೆಗೆ ಸಿದ್ದತೆ ಶುರುವಾದಂತೆ ಒಂದಲ್ಲಾಒಂದು ತಕರಾರು ಕಾಣಸಿಗುತ್ತಿವೆ. ಅದರಂತೆ ಅಕ್ರಮವಾಗಿ ಸಾಗಿಸುತ್ತಿದ್ದ 30.92 ಕೋಟಿ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.
06:47 PM Apr 08, 2024 IST | Nisarga K
30 92 ಕೋಟಿ ರೂ  ಮುಖಬೆಲೆಯ ನಕಲಿ ನೋಟು ವಶ   ಐವರ ಬಂಧನ
30.92 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ : ಐವರ ಬಂಧನ

ಬೆಂಗಳೂರು:  ಲೋಕಸಬಾ ಚುನಾವಣೆಗೆ ಸಿದ್ದತೆ ಶುರುವಾದಂತೆ ಒಂದಲ್ಲಾಒಂದು ತಕರಾರು ಕಾಣಸಿಗುತ್ತಿವೆ. ಅದರಂತೆ ಅಕ್ರಮವಾಗಿ ಸಾಗಿಸುತ್ತಿದ್ದ 30.92 ಕೋಟಿ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.

Advertisement

ಸಾರ್ವಜನಿಕರಿಗೆ 100 ಕೋಟಿ ಕಪ್ಪು ಹಣವಿರುವ ಬಗ್ಗೆ ನಂಬಿಸಿ ನಕಲಿ ನೋಟುಗಳನ್ನು ತೋರಿಸಿ, ಮಂಕುಬೂದಿ ಎರಚುತ್ತಿದ್ದ ಸುಧೀರ್, ಕಿಶೋರ್, ರಿಶಿ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು 40 ಲಕ್ಷ ನೀಡಿದರೆ ವಿವಿಧ ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ಒಂದು ಕೋಟಿ ರೂಪಾಯಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇವರು ಟ್ರಸ್ಟ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದರು ಎಂದು ದಯಾನಂದ ಹೇಳಿದರು.

ವಿಡೀಯೊ ಕಾಲ್ ಮುಖಾಂತರ ತಮ್ಮ ಬಳಿಯಿರುವ ಕಂತೆ ಕಂತೆ ಹಣದ ಬಂಡಲ್‌ಗಳನ್ನು ತೋರಿಸಿದ್ದು ಈ ವೇಳೆ ಅನುಮಾನ ವ್ಯಕ್ತವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಆಗ ವಂಚನೆ ಪ್ರಕರಣ ಬಯಲಿಗೆ ಬಂದಿದೆ

Advertisement

Advertisement
Tags :
Advertisement