For the best experience, open
https://m.newskannada.com
on your mobile browser.
Advertisement

ಕಾರಿನ ಡಿಕ್ಕಿ ಓಪನ್​ ಮಾಡಿದವರಿಗೆ ಕಾದಿತ್ತು ಶಾಕ್ : ಇವರೆಂಥಾ ಕ್ರೂರಿಗಳು !

ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ನಾಲ್ಕು ಅಥವಾ ಐದು ಜನರು ಕುಳಿತು ಪ್ರಯಾಣಿಸಬಹುದಾದ ಕಾರಿನಲ್ಲಿ ಲೋಡ್ ಮಟ್ಟವನ್ನು ಮೀರಿ ಚಲಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಕಾರನ್ನು ತಡೆದು ಡಿಕ್ಕಿ ಓಪನ್ ಮಾಡಿದಾಗ ಕಂಡುಬಂದ ದೃಶ್ಯ ನೋಡಿ ಬೆಚ್ಚಿಬಿದ್ದ ಭಯಾನಕ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವರದಿಯಾಗಿದೆ.
11:46 AM Apr 25, 2024 IST | Ashitha S
ಕಾರಿನ ಡಿಕ್ಕಿ ಓಪನ್​ ಮಾಡಿದವರಿಗೆ ಕಾದಿತ್ತು ಶಾಕ್   ಇವರೆಂಥಾ ಕ್ರೂರಿಗಳು

ನವದೆಹಲಿ: ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ನಾಲ್ಕು ಅಥವಾ ಐದು ಜನರು ಕುಳಿತು ಪ್ರಯಾಣಿಸಬಹುದಾದ ಕಾರಿನಲ್ಲಿ ಲೋಡ್ ಮಟ್ಟವನ್ನು ಮೀರಿ ಚಲಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಕಾರನ್ನು ತಡೆದು ಡಿಕ್ಕಿ ಓಪನ್ ಮಾಡಿದಾಗ ಕಂಡುಬಂದ ದೃಶ್ಯ ನೋಡಿ ಬೆಚ್ಚಿಬಿದ್ದ ಭಯಾನಕ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವರದಿಯಾಗಿದೆ.

Advertisement

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನೊಳಗೆ ಬರೋಬ್ಬರಿ 30ಕ್ಕೂ ಹೆಚ್ಚು ಮೇಕೆಗಳು ಮತ್ತು ಕುರಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಸೆರೆಹಿಡಿದ ಸ್ಥಳೀಯರು ಚಾಲಕನನ್ನು ಹಿಗ್ಗಾಮುಗ್ಗಾ ಜಾಡಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಬಲವಂತವಾಗಿ ಕಾರಿನೊಳಗೆ 30ಕ್ಕೂ ಹೆಚ್ಚು ಮೇಕೆ ಮತ್ತು ಕುರಿಗಳನ್ನು ತುಂಬಿ ಬಚ್ಚಿಟ್ಟಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

Advertisement

ಸದ್ಯ ಪೊಲೀಸರು ಮೇಕೆಗಳನ್ನು ಹಾಗು ಕುರಿಗಳನ್ನು ಸ್ಥಳೀಯ ನೆರವಿನಿಂದ ರಕ್ಷಿಸಿದ್ದು, ಕಾರನ್ನು ಹಾಗು ಕ್ರೂರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

Advertisement
Tags :
Advertisement