For the best experience, open
https://m.newskannada.com
on your mobile browser.
Advertisement

ಪಶ್ಚಿಮ ಆಫ್ರಿಕಾದ ಕನಿಬಾದಲ್ಲಿ ನದಿಗೆ ಉರುಳಿಬಿದ್ದ ಬಸ್: 31 ಜನರ ದುರ್ಮರಣ

ಬಸ್​ವೊಂದು ಸೇತುವೆಯಿಂದ ಉರುಳಿಬಿದ್ದಿದ್ದು, ಸುಮಾರು 31 ಜನರು ಸಾವನ್ನಪ್ಪಿದ ಘಟನೆ  ಪಶ್ಚಿಮ ಆಫ್ರಿಕಾದ ಕನಿಬಾದಲ್ಲಿ ನಡೆದಿದೆ.
09:43 AM Feb 28, 2024 IST | Ashika S
ಪಶ್ಚಿಮ ಆಫ್ರಿಕಾದ ಕನಿಬಾದಲ್ಲಿ ನದಿಗೆ ಉರುಳಿಬಿದ್ದ ಬಸ್  31 ಜನರ ದುರ್ಮರಣ

ಮಾಲಿ: ಬಸ್​ವೊಂದು ಸೇತುವೆಯಿಂದ ನದಿ ನೀರಿಗೆ ಉರುಳಿಬಿದ್ದು, ಸುಮಾರು 31 ಜನರು ಸಾವನ್ನಪ್ಪಿದ ಘಟನೆ  ಪಶ್ಚಿಮ ಆಫ್ರಿಕಾದ ಕನಿಬಾದಲ್ಲಿ ನಡೆದಿದೆ.

Advertisement

ಬಸ್​ನಲ್ಲಿ ಮಾಲಿಯನ್ನರು ಮತ್ತು ಇತರ ನಾಗರೀಕರು ಪ್ರಯಾಣಿಸುತ್ತಿದ್ದರು. ಬುರ್ಕಿನಾ ಫಾಸೊಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ.

ವಾಹನವನ್ನು ನಿಯಂತ್ರಿಸಲು ಚಾಲಕ ವಿಫಲವಾದ ಕಾರಣ ಬಸ್​ ಅಪಘಾತಕ್ಕೀಡಾಗಿದೆ ಎಂದು ಅಲ್ಲಿನ ಸಾರಿಗೆ ಸಚಿವಾಲಯ ತಿಳಿಸಿದೆ.

Advertisement

ಆಫ್ರಿಕಾದ ಬಹುತೇಕನ  ಸಾರ್ವಜನಿಕ ವಾಹನಗಳಲ್ಲಿ ಓವರ್​ ಲೋಡ್​ ಆಗಿ ಪ್ರಯಾಣಿಸುತ್ತಾರೆ. ಇದರಿಂದಾಗಿ ವಾಹನ ನಿಯಂತ್ರಿಸಲಾಗದೆ ಆಗಾಗ ಅಪಘಾತ ಪ್ರಕರಣಗಳು ನಡೆಯುತ್ತಿವೆ.

Advertisement
Tags :
Advertisement