ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೈವೇ ಬದಿ 36 ಟನ್ ತ್ಯಾಜ್ಯ ಸಂಗ್ರಹ; ಮದ್ಯದ ಬಾಟಲಿಗಳದ್ದೇ ಮೇಲುಗೈ

ಮಂಗಳೂರು ನಗರದ ವನ ಚ್ಯಾರಿಟೇಬಲ್ ಟ್ರಸ್ಟ್ ದಿನವಿಡೀ ಕುಂಟಿಕಾನದ ಹೈವೇ ಬದಿಯಲ್ಲಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 36 ಟನ್ ತ್ಯಾಜ್ಯ ಸಂಗ್ರಹಿಸಿದೆ. ಇಷ್ಟೊಂದು ಪ್ರಮಾಣದಲ್ಲಿ ಸಂಗ್ರಹವಾದ ತ್ಯಾಜ್ಯದಲ್ಲಿ ಮದ್ಯದ ಬಾಟಲಿಗಳೇ ಅಧಿಕ ಪ್ರಮಾಣದಲ್ಲಿ ದೊರಕಿವೆ.
11:50 AM Apr 08, 2024 IST | Ashitha S

ಮಂಗಳೂರು : ಮಂಗಳೂರು ನಗರದ ವನ ಚ್ಯಾರಿಟೇಬಲ್ ಟ್ರಸ್ಟ್ ದಿನವಿಡೀ ಕುಂಟಿಕಾನದ ಹೈವೇ ಬದಿಯಲ್ಲಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 36 ಟನ್ ತ್ಯಾಜ್ಯ ಸಂಗ್ರಹಿಸಿದೆ. ಇಷ್ಟೊಂದು ಪ್ರಮಾಣದಲ್ಲಿ ಸಂಗ್ರಹವಾದ ತ್ಯಾಜ್ಯದಲ್ಲಿ ಮದ್ಯದ ಬಾಟಲಿಗಳೇ ಅಧಿಕ ಪ್ರಮಾಣದಲ್ಲಿ ದೊರಕಿವೆ.

Advertisement

ವನ ಚ್ಯಾರಿಟೇಬಲ್ ಟ್ರಸ್ಟ್‌ನೊಂದಿಗೆ ಪ್ಲ್ಯಾನೆಟ್ ಎಸ್‌ಕೆಎಸ್ ಓನರ್ಸ್ ಅಸೋಸಿಯೇಶನ್, ರೋಶನಿ ನಿಲಯ ಕಾಲೇಜು ಹಾಗೂ ಕೆಪಿಟಿ ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳು ಕೈಜೋಡಿಸುವಿಕೆಯಲ್ಲಿ ಈ ತ್ಯಾಜ್ಯ ಸಂಗ್ರಹ ಕಾರ್ಯ ನಡೆದಿದೆ. ವನ ಚ್ಯಾರಿಟೇಬಲ್ ಟ್ರಸ್ಟ್ ನ ಜೀತ್ ಮಿಲನ್ ರೋಚ್, ಭುವನ್ ದೇವಾಡಿಗ, ಪುಷ್ಪರಾಜ್, ಗಣೇಶ್, ಹರ್ಷ, ಸವಿ, ಎಲ್ಸಿಟಾ ಬೆಳಗ್ಗೆ 7.30 ಯಿಂದ ರಾತ್ರಿ 9ಗಂಟೆವರೆಗೆ ಕುಂಟಿಕಾನ ಹೈವೇ ಬದಿಯೊಂದರಲ್ಲೇ ಬರೋಬ್ಬರಿ 36 ಟನ್ ತ್ಯಾಜ್ಯ ಸಂಗ್ರಹಿಸಿದ್ದಾರೆ. ರಮಾ ಕಾಮತ್ ಹಾಗೂ ಕಂಪೆನಿಯಿಂದ ಒದಗಿಸಿರುವ ಜೆಸಿಬಿ ಹಾಗೂ ಟಿಪ್ಪರ್ ಬಳಸಿ ಈ ತ್ಯಾಜ್ಯ ಸಂಗ್ರಹ ಮಾಡಲಾಗಿದೆ. ಎರಡು ಬಾರಿ ಮನಪಾ ಲಾರಿಯೂ ಈ ತ್ಯಾಜ್ಯ ವಿಲೇವಾರಿ ಮಾಡಿದೆ‌.

ಈ ತ್ಯಾಜ್ಯ ಸಂಗ್ರಹದ ವೇಳೆ ಪ್ಲ್ಯಾಸ್ಟಿಕ್ ತ್ಯಾಜ್ಯದೊಂದಿಗೆ, ಲಕೋಟೆಗಳಲ್ಲಿ ಎಸೆದಿರುವ ಮನೆಗಳ ತ್ಯಾಜ್ಯ, ಗುಟ್ಕಾ ಪ್ಲಾಸ್ಟಿಕ್ ದೊಂದಿಗೆ ಬಾಟಲಿಗಳಂತೂ ಬಹಳಷ್ಟು ದೊರಕಿವೆ. ಅಲ್ಲದೇ ಹೈವೇ ಬದಿಯಲ್ಲಿ ಹೆಬ್ಬಾವಿನ 17 ಮೊಟ್ಟೆಗಳು ದೊರಕಿದ್

Advertisement

Advertisement
Tags :
GOVERNMENTindiaKARNATAKALatestNewsNewsKarnatakaಮಂಗಳೂರು
Advertisement
Next Article