For the best experience, open
https://m.newskannada.com
on your mobile browser.
Advertisement

ಭಾರೀ ಮಳೆ: ಮಣ್ಣಿನ ಕುಸಿತದಿಂದ 37 ಮಂದಿ ಮೃತ್ಯು, 74 ಕ್ಕೂ ಹೆಚ್ಚು ಜನ ಕಾಣೆ

ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರೀ ಮಳೆ ಮತ್ತು ಮಣ್ಣಿನ ಕುಸಿತದಿಂದಾಗಿ 37 ಮಂದಿ ಸಾವಿಗೀಡಾಗಿದ್ದಾರೆ. 74 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.
10:12 AM May 04, 2024 IST | Chaitra Kulal
ಭಾರೀ ಮಳೆ  ಮಣ್ಣಿನ ಕುಸಿತದಿಂದ 37 ಮಂದಿ ಮೃತ್ಯು  74 ಕ್ಕೂ ಹೆಚ್ಚು ಜನ ಕಾಣೆ

ಬ್ರೆಜಿಲ್‌: ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರೀ ಮಳೆ ಮತ್ತು ಮಣ್ಣಿನ ಕುಸಿತದಿಂದಾಗಿ 37 ಮಂದಿ ಸಾವಿಗೀಡಾಗಿದ್ದಾರೆ. 74 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

Advertisement

ಕುಸಿದ ಮನೆಗಳು, ಸೇತುವೆಗಳು ಮತ್ತು ರಸ್ತೆಗಳ ಅವಶೇಷಗಳ ಕೆಳಗೆ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ದುರಂತದ ಹವಾಮಾನ ಘಟನೆಯ ನಂತರ ಈ ಪ್ರದೇಶದಲ್ಲಿ ಗವರ್ನರ್ ಎಡ್ವರ್ಡೊ ಲೀಟ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ನಾವು ಇತಿಹಾಸದಲ್ಲಿ ಅತ್ಯಂತ ಕೆಟ್ಟ ದುರಂತವನ್ನು ಎದುರಿಸುತ್ತಿದ್ದೇವೆ. ಅಲ್ ಜಜೀರಾ ವರದಿ ಮಾಡಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗವರ್ನರ್ ಲೀಟ್ ತಿಳಿಸಿದ್ದಾರೆ.‌

Advertisement

ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು 626 ಸೈನಿಕರ ಜೊತೆಗೆ 12 ವಿಮಾನಗಳು, 45 ವಾಹನಗಳು ಮತ್ತು 12 ದೋಣಿಗಳನ್ನು ನಿಯೋಜಿಸಲಾಗಿದೆ. ಫೆಡರಲ್ ಸಹಾಯವನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ. ರಸ್ತೆಗಳನ್ನು ತೆರವುಗೊಳಿಸುವುದು, ಆಹಾರ, ನೀರು ಮತ್ತು ಹಾಸಿಗೆಗಳಂತಹ ಅಗತ್ಯ ಸಾಮಗ್ರಿಗಳನ್ನು ವಿತರಿಸುವುದು ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಆಶ್ರಯವನ್ನು ಸ್ಥಾಪಿಸುವ ಕೆಲಸ ಮಾಡಲಾಗುತ್ತಿದೆ.

ರಾಜ್ಯದ ಪ್ರಮುಖ ಗೈಬಾ ನದಿಯು ಆತಂಕಕಾರಿ ಮಟ್ಟವನ್ನು ತಲುಪುವ ಸಾಧ್ಯತೆ ಇದೆ. ಇದರಿಂದ ಮತ್ತಷ್ಟು ಬಿಕ್ಕಟ್ಟು ಉಂಟಾಗಬಹುದು ಎಂದು ನದಿಪಾತ್ರದ ಜನರಿಗೆ ಎಚ್ಚರಿಕೆ ಮುನ್ಸೂಚನೆ ನೀಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Advertisement
Tags :
Advertisement