ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆಯಲ್ಲಿ 48 ದಿನಗಳ ಮಂಡಲೋತ್ಸವ ಸಂಪನ್ನ: ರಾಮನಿಗೆ 1008 ಕಲಶ ಸಹಿತ ಬ್ರಹ್ಮ‌ಕಲಶಾಭಿಷೇಕ

ಅಯೋಧ್ಯೆ ನೂತನ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯು ನೆರವೇರಿದ ಮರುದಿನದಿಂದ ಶ್ರೀ ಪೇಜಾವರ ಶ್ರೀಗಳ ದಿವ್ಯ ನೇತೃತ್ವದಲ್ಲಿ 48 ದಿನಗಳ ಮಂಡಲೋತ್ಸವ ಆರಂಭವಾಗಿತ್ತು.
02:09 PM Mar 11, 2024 IST | Ashika S

ಉಡುಪಿ: ಅಯೋಧ್ಯೆ ನೂತನ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯು ನೆರವೇರಿದ ಮರುದಿನದಿಂದ ಶ್ರೀ ಪೇಜಾವರ ಶ್ರೀಗಳ ದಿವ್ಯ ನೇತೃತ್ವದಲ್ಲಿ 48 ದಿನಗಳ ಮಂಡಲೋತ್ಸವ ಆರಂಭವಾಗಿತ್ತು.

Advertisement

ಭಾನುವಾರ ಅದರ ಕೊನೆಯ ದಿನವಾಗಿದ್ದು ಶ್ರೀರಾಮನಿಗೆ ವೈಭವದಿಂದ 1008 ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವ ನೆರವೇರಿಸುವ ಬಗ್ಗೆ ಬೆಳಿಗ್ಗೆಯಿಂದಲೇ ನೂರಾರು ಋತ್ವಿಜರ ಉಪಸ್ಥಿತಿಯಲ್ಲಿ ತತ್ವ ಹೋಮ ಸಹಿತ ವಿವಿಧ ಹೋಮ ಹವನಾದಿಗಳು, ಕಲಶ ಸ್ಥಾಪನಾ ಪೂರ್ವಕ ಕಲಶ ಪೂಜೆ ವಿಧಿ ವಿಧಾನಗಳು ಸಂಪನ್ನಗೊಂಡವು.

ಶ್ರೀರಾಮನ ಬ್ರಹ್ಮಕಲಶೋತ್ಸವ ನಿಮಿತ್ತ ಇಡೀ ರಾಮಮಂದಿರವನ್ನು ಆಕರ್ಷಕ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮಂದಿರದಲ್ಲಿ ಅಸಂಖ್ಯ ಭಕ್ತರು ಸಾಲು ಸಾಲು ಆಗಮಿಸಿ ದೇವರ ದರ್ಶನ ಪಡೆದರು.

Advertisement

ಪವಿತ್ರ ಕಲಶಾಭಿಷೇಕಕ್ಕೆ ಶ್ರೀಗಳು ಸರಯೂ ಮಾತ್ರವಲ್ಲದೇ ಗಂಗಾ ಅಲಕನಂದಾ ಸಹಿತ ಅನೇಕ ನದಿಗಳ ಪವಿತ್ರ ಜಲವನ್ನು ತರಿಸಿ ಬಳಸಿಕೊಂಡಿರು. ಒಟ್ಟಾರೆ 48 ದಿನಗಳ ಮಂಡಲೋತ್ಸವವು ಉಡುಪಿಯ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಂಪನ್ನಗೊಂಡಿದ್ದು ಕರಾವಳಿ ಮಾತ್ರವಲ್ಲ, ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

Advertisement
Tags :
LatetsNewsNewsKannadaUDUPI
Advertisement
Next Article