For the best experience, open
https://m.newskannada.com
on your mobile browser.
Advertisement

104 ವರ್ಷದ ಅಜ್ಜಿಯ ಪ್ರೇಮದಲ್ಲಿ ಬಿದ್ದ 48 ವರ್ಷದ ವ್ಯಕ್ತಿ

ಆಶ್ಚರ್ಯ ವೆನಿಸಿದರು ಇದು ಸತ್ಯ ಸಂಗತಿ, 104 ವರ್ಷದ ಅಜ್ಜಿಯ ಪ್ರೀತಿಯಲ್ಲಿ ಬಿದ್ದ 48 ವರ್ಷದ ವ್ಯಕ್ತಿ 11 ವರ್ಷ ಪ್ರೀತಿಯ ಕಥೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.
07:19 PM Apr 18, 2024 IST | Nisarga K
104 ವರ್ಷದ ಅಜ್ಜಿಯ ಪ್ರೇಮದಲ್ಲಿ ಬಿದ್ದ 48 ವರ್ಷದ ವ್ಯಕ್ತಿ
104 ವರ್ಷದ ಅಜ್ಜಿಯ ಪ್ರೇಮದಲ್ಲಿ ಬಿದ್ದ 48 ವರ್ಷದ ವ್ಯಕ್ತಿ

ಆಸ್ಟ್ರೇಲಿಯಾ: ಆಶ್ಚರ್ಯ ವೆನಿಸಿದರು ಇದು ಸತ್ಯ ಸಂಗತಿ, 104 ವರ್ಷದ ಅಜ್ಜಿಯ ಪ್ರೀತಿಯಲ್ಲಿ ಬಿದ್ದ 48 ವರ್ಷದ ವ್ಯಕ್ತಿ 11 ವರ್ಷ ಪ್ರೀತಿಯ ಕಥೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Advertisement

ಐರೋಪ್ಯ ದೇಶವಾದ ಎಸ್ಟೋನಿಯಾದ 48 ವರ್ಷದ ಮಾರ್ಟ್ ಸುಸಾನ್ ಎಂಬ ವ್ಯಕ್ತಿ ವೃತ್ತಿಯಲ್ಲಿ ವಕೀಲರಾಗಿರುವ ಮಾರ್ಕ್ ಅವರು ಇಂಗ್ಲಿಷ್ ಕಲಿಯಲು ಆಸ್ಟ್ರೇಲಿಯಾಕ್ಕೆ ಹೋದಾಗ ಆಲ್ಫ್ರೆಡೋ ಅವರನ್ನು ಮೊದಲು ಭೇಟಿಯಾದರು. ಮೊದಲ ಭೇಟಿಯಲ್ಲೇ ನಾನು ಆಕೆಯನ್ನು ನೋಡಿ ಆಕರ್ಷಿತನಾದೆ ಎಂದು ಮಾರ್ಕ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮಾರ್ಟ್ ಸುಸಾನ್ಆ ಸ್ಟ್ರೇಲಿಯಾದ 104 ವರ್ಷದ ಆಲ್ಫ್ರೆಡೋ ರಿಟ್ ಅವರನ್ನು 11 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಆದರೆ ಕಳೆದ ಶನಿವಾರ (ಏ.13) 104 ವರ್ಷದ ಆಲ್ಫ್ರೆಡೋ ನಿಧನ ಹೊಂದಿದ್ದು, ಇದೀಗ ಇವರಿಬ್ಬರ ಪ್ರೇಮ್​​ ಕಹಾನಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

Advertisement

ಆಲ್ಫ್ರೆಡೋ ರಿಟ್ ಇಲ್ಲದೆ ನನ್ನ ಜೀವನ ಅಪೂರ್ಣ. ನಮ್ಮ ನಡುವೆ ದೈಹಿಕ ಸಂಬಂಧ ಇಲ್ಲದಿದ್ದರೂ ಪತಿ-ಪತ್ನಿಯರ ನಡುವೆ ಭಾವನಾತ್ಮಕ ಸಂಬಂಧವಿತ್ತು ಎಂದು ಮಾರ್ಟ್ ಹೇಳಿರುವುದು ವರದಿಯಾಗಿದೆ.

Advertisement
Tags :
Advertisement