ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತೀವ್ರಗೊಂಡ 'ದೆಹಲಿ ಚಲೋ': ಇಂದು ರೈತರು-ಸರ್ಕಾರದ ನಡುವೆ 4ನೇ ಸುತ್ತಿನ ಮಾತುಕತೆ

ಪಂಜಾಬ್​ ಮತ್ತು ಹರಿಯಾಣ ರೈತರು ನಡೆಸುತ್ತಿರುವ 'ದೆಹಲಿಚಲೋ' ಹೋರಾಟ ದಿನಕಳೆಯುತ್ತಿದ್ದಂತೆ ತೀವ್ರತೆ ಪಡೆದುಕೊಳ್ಳುತ್ತಿದೆ. ಶಂಭು ಗಡಿಯಲ್ಲಿ ನಿಹಾಂಗ್​ ಸಿಖ್ಖರು ಕತ್ತಿ ಝಳಪಿಸುತ್ತಿರುವ ಮತ್ತು ಖಲಿಸ್ತಾನಿ ಉಗ್ರ ಭಿಂದ್ರನ್​ ವಾಲೆ ಚಿತ್ರ ಹೋರಾಟದಲ್ಲಿ ಕಂಡುಬಂದಿದೆ.
12:22 PM Feb 18, 2024 IST | Ashitha S

ಹರಿಯಾಣ: ಪಂಜಾಬ್​ ಮತ್ತು ಹರಿಯಾಣ ರೈತರು ನಡೆಸುತ್ತಿರುವ 'ದೆಹಲಿಚಲೋ' ಹೋರಾಟ ದಿನಕಳೆಯುತ್ತಿದ್ದಂತೆ ತೀವ್ರತೆ ಪಡೆದುಕೊಳ್ಳುತ್ತಿದೆ. ಶಂಭು ಗಡಿಯಲ್ಲಿ ನಿಹಾಂಗ್​ ಸಿಖ್ಖರು ಕತ್ತಿ ಝಳಪಿಸುತ್ತಿರುವ ಮತ್ತು ಖಲಿಸ್ತಾನಿ ಉಗ್ರ ಭಿಂದ್ರನ್​ ವಾಲೆ ಚಿತ್ರ ಹೋರಾಟದಲ್ಲಿ ಕಂಡುಬಂದಿದೆ.

Advertisement

ಇದು 2021ರ ಹೋರಾಟದಲ್ಲಿ ನಡೆದ ಹಿಂಸಾಚಾರವನ್ನು ಮರುಕಳಿಸುವ ಸೂಚನೆ ನೀಡಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ಪಂಜಾಬ್​ ಮತ್ತು ಹರಿಯಾಣದ ಹಲವು ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಕೆಲವರು ಬಿಲ್ಲು ಬಾಣ ಹಿಡಿದು ತಿರುಗಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಸಂಘರ್ಷ ವಾತಾವರಣ ಉಂಟಾಗಿದೆ.

Advertisement

ಒಂದೆಡೆ ರೈತ ನಾಯಕರು ಶಾಂತಿಯುತ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದರೆ, ಪ್ರತಿಭಟನಾಕಾರರು ತೀವ್ರತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಈ ನಡುವೆ ರೈತ ಹೋರಾಟ ಆರಂಭವಾದ ದಿನದಿಂದ ಅಮಾನತಿನಲ್ಲಿರುವ ಮೊಬೈಲ್​ ಇಂಟರ್​ನೆಟ್​, ಸಂದೇಶ ರವಾನೆ ಸೇವೆಯನ್ನು ಫೆಬ್ರವರಿ 19ರ ವರೆಗೆ ನಿರ್ಬಂಧಿಸಿ ವಿಸ್ತರಿಸಲಾಗಿದೆ.

ಇನ್ನು ಪ್ರತಿಭಟನೆ ಹತ್ತಿಕ್ಕಲು ಸರ್ಕಾರದ ನಡೆಸುತ್ತಿರುವ ಯತ್ನಗಳು ಮುಂದುವರೆದಿದ್ದು, ಇಂದು ಸಂಜೆ 5 ಗಂಟೆಗೆ ರೈತ ಸಂಘಟನೆಗಳೊಂದಿಗೆ 4ನೇ ಸುತ್ತಿನ ಸಭೆ ನಿಗದಿಯಾಗಿದೆ.

 

Advertisement
Tags :
Bharat bandhFARMERS PROTESTGOVERNMENTindiaLatestNewsNewsKannadaದೆಹಲಿ ಚಲೋನವದೆಹಲಿಶಂಭುಗಡಿ
Advertisement
Next Article