ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ʼಕಂಡಕ್ಟರ್ 5 ರೂ.ಚಿಲ್ಲರೆ ಹಣ ವಾಪಸ್ ನೀಡಿಲ್ಲʼ; ಸಖತ್ ವೈರಲ್ ಆಗ್ತಿದೆ ನೋಡಿ ಈ ಪೋಸ್ಟ್‌

ಸಾಮಾನ್ಯವಾಗಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಚಿಲ್ಲರೆ ಹಣದ ವಿಷಯವಾಗಿ ಆಗಾಗ್ಗೆ ಜಗಳಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಕಂಡಕ್ಟರ್ 1 ರೂಪಾಯಿ ಚಿಲ್ಲರೆ ಹಣವನ್ನು ಮತ್ತೆ ಕೊಡುತ್ತೇನೆ ಎಂದು ಪ್ರಯಾಣಿಕರಿಗೆ ವಾಪಸ್ ಹಿಂದಿರುಗಿಸೋದೇ ಇಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ಬೆಂಗಳೂರಿನ ಬಿ.ಎಂ.ಟಿ.ಸಿ ಬಸ್ ಒಂದರಲ್ಲಿ ನಡೆದಿದ್ದು, ಕಂಡಕ್ಟರ್ 5 ರೂಪಾಯಿ ಚಿಲ್ಲರೆ ಹಣ ವಾಪಸ್ ಕೊಟ್ಟಿಲ್ಲ ಎಂದು ಆ ಪ್ರಯಾಣಿಕ ತನ್ನ ಅಸಮಾಧಾನವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾನೆ. ಈ ಕುರಿತ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.
12:17 PM Apr 17, 2024 IST | Ashitha S

ಬೆಂಗಳೂರು: ಸಾಮಾನ್ಯವಾಗಿ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಚಿಲ್ಲರೆ ಹಣದ ವಿಷಯವಾಗಿ ಆಗಾಗ್ಗೆ ಜಗಳಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಕಂಡಕ್ಟರ್ 1 ರೂಪಾಯಿ ಚಿಲ್ಲರೆ ಹಣವನ್ನು ಮತ್ತೆ ಕೊಡುತ್ತೇನೆ ಎಂದು ಪ್ರಯಾಣಿಕರಿಗೆ ವಾಪಸ್ ಹಿಂದಿರುಗಿಸೋದೇ ಇಲ್ಲ. ಇದೀಗ ಅದೇ ರೀತಿಯ ಘಟನೆಯೊಂದು ಬೆಂಗಳೂರಿನ ಬಿ.ಎಂ.ಟಿ.ಸಿ ಬಸ್ ಒಂದರಲ್ಲಿ ನಡೆದಿದ್ದು, ಕಂಡಕ್ಟರ್ 5 ರೂಪಾಯಿ ಚಿಲ್ಲರೆ ಹಣ ವಾಪಸ್ ಕೊಟ್ಟಿಲ್ಲ ಎಂದು ಆ ಪ್ರಯಾಣಿಕ ತನ್ನ ಅಸಮಾಧಾನವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾನೆ. ಈ ಕುರಿತ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.

Advertisement

ಈ ಪೋಸ್ಟ್​​ನ್ನು ನಿತೀನ್ ಕೃಷ್ಣ (N_4_NITHIN) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಕಂಡಕ್ಟರ್ ಬಳಿ 1 ರೂಪಾಯಿ ಚೇಂಜ್ ಕೂಡಾ ಇಲ್ಲವೇ? ನಾನು ನನ್ನ 5 ರೂಪಾಯಿ ಹಣವನ್ನು ಕಳೆದುಕೊಂಡೆ, ಇದಕ್ಕೆ ಏನಾದರೂ ಪರಿಹಾರ ಇದೆಯೇ?” ಎಂದು ಬಿ.ಎಂ.ಟಿ.ಸಿಯ ಅಧೀಕೃತ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ನಿತೀನ್ ಅವರು ಬಿ.ಎಂ.ಟಿ.ಸಿ ಬಸ್ಸಿನಲ್ಲಿ ರಾಗಿಗುಡ್ಡ ದೇವಸ್ಥಾನದಿಂದ ಹೆಚ್.ಎಸ್.ಆರ್ ಡಿಪೋದ ಕಡೆ ಹೋಗುತ್ತಾರೆ. ಟಿಕೆಟ್ ಬೆಲೆ ರೂಪಾಯಿ 15 ಆಗಿದ್ದರಿಂದ ನಿತೀನ್ 20 ರೂಪಾಯಿ ನೋಟನ್ನು ಕಂಡಕ್ಟರ್ ಗೆ ನೀಡುತ್ತಾರೆ. ಆದರೆ ಆ ಕಂಡಕ್ಟರ್ ವಾಪಸ್ 5 ರೂಪಾಯಿ ಚಿಲ್ಲರೆ ಹಣವನ್ನು ನೀಡಲೇ ಇಲ್ಲ. ಹೀಗೆ ಕಂಡಕ್ಟರ್ ಚಿಲ್ಲರೆ ಹಣವನ್ನು ವಾಪಸ್ ನೀಡಿಲ್ಲ ಎಂಬ ವಿಚಾರವನ್ನು ನಿತೀನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

 

 

Advertisement
Tags :
BMTCGOVERNMENTKARNATAKALatestNewsNewsKarnataka
Advertisement
Next Article