ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರ್ನಾಟಕ ಲೋಕಸಭಾ ಚುನಾವಣೆ 2024; ಎಲ್ಲಿ ಗರಿಷ್ಠ, ಕನಿಷ್ಠ ಮತದಾನ?

ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ದೇಶಾದ್ಯಂತ ನಡೆಯುತ್ತಿದೆ. ಕರ್ನಾಟಕದಲ್ಲಿನ 2 ಹಂತದ ಮತದಾನ ಪೈಕಿ ಇಂದು ಮೊದಲ ಹಂತದ ಮತದಾನ. ಮತದಾರರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.
05:09 PM Apr 26, 2024 IST | Ashitha S

ಬೆಂಗಳೂರು: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ದೇಶಾದ್ಯಂತ ನಡೆಯುತ್ತಿದೆ. ಕರ್ನಾಟಕದಲ್ಲಿನ 2 ಹಂತದ ಮತದಾನ ಪೈಕಿ ಇಂದು ಮೊದಲ ಹಂತದ ಮತದಾನ. ಮತದಾರರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

Advertisement

ಚುನಾವಣಾ ಆಯೋಗ ನೀಡಿರುವ ಇದುವರೆಗಿನ(ಮಧಾಹ್ಯ 3 ಗಂಟೆವರೆಗೆ) ಅಂಕಿ ಅಂಶದ ಪ್ರಕಾರ, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ 14 ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಗರಿಷ್ಠ ಮತದಾನವಾಗಿದೆ. ಇನ್ನು ಬೆಂಗಳೂರು ಸೆಂಟ್ರಲ್‌ನಲ್ಲಿ ಕನಿಷ್ಠ ಮತದಾನ ದಾಖಲಾಗಿದೆ.

ದಕ್ಷಿಣ ಕನ್ನಡದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಶೇಕಡ 58.76ರಷ್ಟು ಮತದಾನವಾಗಿದೆ. (ಬೆಳ್ತಂಗಡಿ 61.41, ಮೂಡಬಿದ್ರಿ 54.95,
ಮಂಗಳೂರು 58.72, ಬಂಟ್ವಾಳ 61.17, ಪುತ್ತೂರು 62,  ಸುಳ್ಯ 64.46) ಇನ್ನು ಕನಿಷ್ಠ ಮತದಾನ ದಾಖಲಾಗಿರುವ ಬೆಂಗಳೂರು ಸೆಂಟ್ರಲ್‌ನಲ್ಲಿ ಶೇಕಡಾ 40.10 ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ದಾಖಲಾಗಿಲ್ಲ. ಈ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 49.62ರಷ್ಟು ಮತದಾನ ದಾಖಲಾಗಿದೆ.

Advertisement

ಉಡುಪಿ ಚಿಕ್ಕಮಗಳೂ ಕ್ಷೇತ್ರದಲ್ಲಿ 57.49ರಷ್ಟು ಮತದಾನವಾಗಿದೆ. ಇನ್ನು ಹಾಸನದಲ್ಲಿ ಶೇಕಡಾ 55.92, ಚಿತ್ರದುರ್ಗದಲ್ಲಿ ಶೇಕಡಾ 52.14 ರಷ್ಟು ಮತದಾನವಾಗಿದೆ. ಇನ್ನು ತುಮಕೂರಿನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3ಗಂಟೆ ವರೆಗೆ ಶೇಕಡಾ 56.62ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ಶೇಕಡಾ 57.44, ಮೈಸೂರಿನಲ್ಲಿ ಶೇಕಡಾ 53.55, ಚಾಮರಾಜನಗರದಲ್ಲಿ ಶೇಕಡಾ 53.55ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 49.62 ರಷ್ಟು, ಬೆಂಗಳೂರು ಉತ್ತರದಲ್ಲಿ ಶೇಕಡಾ 41.12ರಷ್ಟು, ಬೆಂಗಳೂರು ಸೆಂಟ್ರಲ್‌ನಲ್ಲಿ ಶೇಕಡಾ 40.10, ಬೆಂಗಳೂರು ದಕ್ಷಿಣದಲ್ಲಿ ಶೇಕಡಾ 40.77ರಷ್ಟು, ಚಿಕ್ಕಬಳ್ಳಾಪುರದಲ್ಲಿ ಶೇಕಡಾ 55.90 ಹಾಗೂ ಕೋಲಾರದಲ್ಲಿ ಶೇಕಡಾ 54.66 ರಷ್ಟು ಮತದಾನವಾಗಿದೆ.

ರಾಜ್ಯದಲ್ಲಿ ಇಂದು ನಡೆಯುತ್ತಿರುವ ಮೊದಲ ಹಂತದ ಮತಾನದಲ್ಲಿ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Advertisement
Tags :
BJPCongressGOVERNMENTindiaKARNATAKAlokasabha electionNewsKarnatakaVOTE
Advertisement
Next Article