For the best experience, open
https://m.newskannada.com
on your mobile browser.
Advertisement

6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕನಿಂದ ಅತ್ಯಾಚಾರ

ಉತ್ತರ ಪ್ರದೇಶದ ಆಗ್ರಾದಲ್ಲಿ 6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕ ಅತ್ಯಾಚಾರವೆಸಗಿರುವ ಘಟನೆ  ನಡೆದಿದೆ.
12:15 PM Apr 12, 2024 IST | Ashika S
6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕನಿಂದ ಅತ್ಯಾಚಾರ

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ 6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕ ಅತ್ಯಾಚಾರವೆಸಗಿರುವ ಘಟನೆ  ನಡೆದಿದೆ.

Advertisement

ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ, 4ನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 8 ರಂದು ರಾತ್ರಿ 7:30 ರ ಸುಮಾರಿಗೆ ಬಾಲಕಿ ಟ್ಯೂಷನ್​​ ಕ್ಲಾಸ್​​ ಮುಗಿಸಿ ಬರುವ ಹೊತ್ತಿಗೆ ಬಾಲಕಿಯನ್ನು ಬಾಲಕ ತನ್ನೊಂದೊಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ಯದು ಅತ್ಯಾಚಾರ ವೆಸಗಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.

Advertisement

ಟ್ಯೂಷನ್​​ ಕ್ಲಾಸ್​ ಮುಗಿಸಿ ಮನೆ ಬಂದ ಬಾಲಕಿಯ ಬಟ್ಟೆಯಲ್ಲಿ ರಕ್ತಸ್ರಾವ ಕಂಡು ಪೋಷಕರಿಗೆ ಅನುಮಾನ ಹುಟ್ಟಿಕೊಂಡಿದ್ದು, ವಿಚಾರಿಸಿದ ವೇಳೆ ಏನಾಯ್ತು ಎಂಬುದನ್ನು ಆಕೆ ಪೋಷಕರಿಗೆ ಹೇಳಿದ್ದಾಳೆ. ಬಾಲಕ ಪರಿಚಯಸ್ಥನೇ ಎಂದು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ.

ವೈದ್ಯಕೀಯ ಪರೀಕ್ಷೆಯ ವೇಳೆ ಅತ್ಯಾಚಾರ ದೃಢಪಟ್ಟಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಲಕನ ಮೇಲೆ ಕೇಸು ದಾಖಲಾಗಿದೆ.

Advertisement
Tags :
Advertisement