For the best experience, open
https://m.newskannada.com
on your mobile browser.
Advertisement

15 ಬಸ್​ಗಳಲ್ಲಿ ಬೆಂಗಳೂರಿನಿಂದ ಕೇರಳಕ್ಕೆ 600 ಜನರ ಸಾಗಾಟ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಜನರನ್ನು ಕೇರಳಕ್ಕೆ ಕರೆದುಕೊಂಡು ಹೋಗುತ್ತಿದ್ದ 15 ಬಸ್​ಗಳನ್ನು ಬಿಜೆಪಿ  ಮತ್ತು ಭಜರಂಗದಳ ಕಾರ್ಯಕರ್ತರು ತಡೆದಿದ್ದಾರೆ.
09:00 AM Apr 26, 2024 IST | Ashika S
15 ಬಸ್​ಗಳಲ್ಲಿ ಬೆಂಗಳೂರಿನಿಂದ ಕೇರಳಕ್ಕೆ 600 ಜನರ ಸಾಗಾಟ

ಬೆಂಗಳೂರು:  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಜನರನ್ನು ಕೇರಳಕ್ಕೆ ಕರೆದುಕೊಂಡು ಹೋಗುತ್ತಿದ್ದ 15 ಬಸ್​ಗಳನ್ನು ಬಿಜೆಪಿ  ಮತ್ತು ಭಜರಂಗದಳ ಕಾರ್ಯಕರ್ತರು ತಡೆದಿದ್ದಾರೆ.

Advertisement

ವಿಚಾರ ತಿಳಿದು ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು 5 ಬಸ್​ಗಳನ್ನು ಜಪ್ತಿ ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಅಜ್ಮಲ್ ಮಾತನಾಡಿ, ಕೆಲಸಕ್ಕೆ ಅಂತ ಕೇರಳದಿಂದ ಇಲ್ಲಿಗೆ ಬಂದಿದ್ದ ಜನ ಮತ ಹಾಕಲು ಅವರ ಊರಿಗೆ ಹೊರಟಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಬಸ್ ಸಿಗುತ್ತಿಲ್ಲ. ಹೀಗಾಗಿ ಅವರು ಸ್ವಂತ ಖರ್ಚಿನಲ್ಲಿ ಕೇರಳಕ್ಕೆ ಹೊರಟಿದ್ದರು.

Advertisement

ತಮಿಳುನಾಡಿನಲ್ಲಿ ಮತದಾನ ನಡೆದಾಗ ಹೊಸೂರಿನಿಂದ ಬಸ್​ಗಳು ಹೋದವು. ಆವಾಗ ಯಾಕೆ ಚುನಾವಣಾ ಅಧಿಕಾರಿಗಳು ಬಂದಿಲ್ಲ. ಸೌಮ್ಯರೆಡ್ಡಿ ಪರ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ. ಹೀಗಾಗಿ ಮೈಂಡ್ ಡೈವರ್ಟ್ ಮಾಡುವುದಕ್ಕಾಗಿ ಪ್ಲಾನ್ ಮಾಡುತ್ತಿದ್ದಾರೆ. ಒಂದು ಟ್ರಸ್ಟ್ ಮೂಲಕ ಕೇರಳಕ್ಕೆ ಹೋಗುತ್ತಿದ್ದಾರೆ. ಅವರು ಹೋಗುತ್ತಿದ್ದ ಬಸ್​ಗಳನ್ನು ತಡೆದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರೇ ಬಸ್​ಗಳಲ್ಲಿ ಕಾಂಗ್ರೆಸ್ ಕರಪತ್ರಗಳನ್ನು ಹಾಕಿದ್ದಾರೆ ಎಂದು ಆರೋಪ ಮಾಡಿದರು.

Advertisement
Tags :
Advertisement