ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಹಾಶಿವರಾತ್ರಿ ಆಚರಿಸಲು ಪಾಕ್‌ ತಲುಪಿದ 62 ಮಂದಿ ಹಿಂದೂ ಯಾತ್ರಿಕರು

ಮಹಾಶಿವರಾತ್ರಿ ಆಚರಣೆಗಾಗಿ 62 ಮಂದಿ ಹಿಂದೂಗಳು ವಾಘಾ ಗಡಿ ಮೂಲಕ ಬುಧವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ. 'ಮಹಾಶಿವರಾತ್ರಿ ಆಚರಣೆಗಾಗಿ ಒಟ್ಟು 62 ಮಂದಿ ಹಿಂದೂ ಯಾತ್ರಿಕರು ಭಾರತದಿಂದ ಲಾಹೋರ್‌ಗೆ ಆಗಮಿಸಿದ್ದಾರೆ' ಎಂದು ಇವಕ್ಯೂ ದತ್ತಿ ಮಂಡಳಿಯ ವಕ್ತಾರ ಅಮೀರ್ ಹಶ್ಮಿ ತಿಳಿಸಿದ್ದಾರೆ.
06:43 AM Mar 07, 2024 IST | Ashitha S

ಲಾಹೋರ್: ಮಹಾಶಿವರಾತ್ರಿ ಆಚರಣೆಗಾಗಿ 62 ಮಂದಿ ಹಿಂದೂಗಳು ವಾಘಾ ಗಡಿ ಮೂಲಕ ಬುಧವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ. 'ಮಹಾಶಿವರಾತ್ರಿ ಆಚರಣೆಗಾಗಿ ಒಟ್ಟು 62 ಮಂದಿ ಹಿಂದೂ ಯಾತ್ರಿಕರು ಭಾರತದಿಂದ ಲಾಹೋರ್‌ಗೆ ಆಗಮಿಸಿದ್ದಾರೆ' ಎಂದು ಇವಕ್ಯೂ ದತ್ತಿ ಮಂಡಳಿಯ ವಕ್ತಾರ ಅಮೀರ್ ಹಶ್ಮಿ ತಿಳಿಸಿದ್ದಾರೆ.

Advertisement

'ಲಾಹೋರ್‌ನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಚಕ್ವಾಲ್‌ನ ಐತಿಹಾಸಿಕ ಕತಾಸ್ ರಾಜ್ ದೇಗುಲದಲ್ಲಿ ಮಾರ್ಚ್ 9 ರಂದು ಮಹಾಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಮುಖಂಡರೂ ಸಹ ಭಾಗವಹಿಸಲಿದ್ದಾರೆ' ಎಂದು ಹಶ್ಮಿ ಹೇಳಿದ್ದಾರೆ.

'ವಿಶ್ವನಾಥ್ ಬಜಾಜ್ ನೇತೃತ್ವದ ಹಿಂದೂ ಯಾತ್ರಿಕರು ಲಾಹೋರ್‌ನ ಗುರುದ್ವಾರ ಡೇರಾ ಸಾಹಿಬ್‌ನಲ್ಲಿ ಕಳೆದ ದಿನ ತಂಗಿದ್ದು, ಇಂದು ಕತಾಸ್ ರಾಜ್ ದೇವಾಲಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ' ಎಂದು ಹೇಳಿದ್ದಾರೆ.

Advertisement

ಮಾರ್ಚ್ 10ರಂದು ಲಾಹೋರ್‌ಗೆ ವಾಪಸ್ ಆಗಲಿರುವ ಯಾತ್ರಿಕರು, ಮಾರ್ಚ್ 11ರಂದು ಇಲ್ಲಿನ ಕೃಷ್ಣ ದೇಗುಲ, ಲಾಹೋರ್ ಕೋಟೆ ಮತ್ತು ಇತರೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಮಾರ್ಚ್ 12ರಂದು ಸ್ವದೇಶಕ್ಕೆ ವಾಪಸ್ ಆಗುತ್ತಾರೆ.

Advertisement
Tags :
indiaLatestNewsNewsKannadaಮಹಾಶಿವರಾತ್ರಿಹಿಂದೂ
Advertisement
Next Article