ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ಲಂಚ ಪಡೆದಿದ್ದ ಬಿಎಂಟಿಸಿಯ 7 ಅಧಿಕಾರಿಗಳ ಸಸ್ಪೆಂಡ್

ಗೂಗಲ್ ಪೇ, ಫೋನ್ ಪೇ ಮೂಲಕ ಸುಮಾರು ಒಂದೂವರೆ ಕೋಟಿ ರುಪಾಯಿಗೂ ಹೆಚ್ಚು ಲಂಚ ಪಡೆದಿದ್ದ ಬಿಎಂಟಿಸಿಯ ಏಳು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
05:21 PM Jan 14, 2024 IST | Ashika S

ಬೆಂಗಳೂರು: ಗೂಗಲ್ ಪೇ, ಫೋನ್ ಪೇ ಮೂಲಕ ಸುಮಾರು ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ಲಂಚ ಪಡೆದಿದ್ದ ಬಿಎಂಟಿಸಿಯ ಏಳು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

Advertisement

ಬಿಎಂಟಿಸಿಯಲ್ಲಿ ಇದೆ ಮೊದಲ ಬಾರಿಗೆ ಅಧಿಕಾರಿಗಳ ಅಕೌಂಟ್ ನಲ್ಲಿ ಇಷ್ಟು ದೊಡ್ಡ ಮೊತ್ತ ಪತ್ತೆಯಾಗಿದೆ.

ಡ್ಯೂಟಿ, ವೀಕ್ಲಿ ಆಫ್ ರಜೆ ಹಾಗೂ ಕಂಡಿಷನ್ ಇರುವ ಮತ್ತು ಹೆಚ್ಚು ಕಲೆಕ್ಷನ್ ಬರುವ ಬಸ್ ಬೇಕು ಅಂದರೆ ಡಿಪೋ ಮ್ಯಾನೇಜರ್, ಮತ್ತು ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕು. ಹಣ ನೀಡಿದ್ರೆ ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಹಣ ನೀಡಿಲ್ಲ ಅಂದರೆ ಮಾನಸಿಕವಾಗಿ ಕಿರುಕುಳ ನೀಡುವುದು ಮಾಡುತ್ತಾರೆ.

Advertisement

ಒಬ್ಬೊಬ್ಬ ಅಧಿಕಾರಿಗಳ ಅಕೌಂಟ್ ನಲ್ಲಿ ಸುಮಾರು 20 ರಿಂದ 25 ಲಕ್ಷ ರೂಪಾಯಿ ಸಿಕ್ಕಿದೆ. ಇದರೊಂದಿಗೆ ಒಟ್ಟು ಏಳು ಅಧಿಕಾರಿಗಳಿಂದ ಸುಮಾರು ಒಂದೂವರೆ ಕೋಟಿ ರುಪಾಯಿ ಅಕ್ರಮ ಹಣ ಪತ್ತೆಯಾಗಿದೆ.

ಕಂಡಕ್ಟರ್ ಡ್ರೈವರ್ ಗಳಿಂದ ಪ್ರತಿ ವಾರ 500 ರುಪಾಯಿ ಅಂತೆ ಪ್ರತಿ ತಿಂಗಳಿಗೆ ಎರಡು ಸಾವಿರ ರುಪಾಯಿ ವಸೂಲಿ ಮಾಡಲಾಗುತ್ತಿತ್ತು.

ಏಳು ಅಧಿಕಾರಿಗಳ ಎಲ್ಲಾ ಬ್ಯಾಂಕ್ ಡಿಟೇಲ್ಸ್ ತನಿಖೆ ನಡೆಸಿದಾಗ ಪ್ರತಿಯೊಬ್ಬರ ಅಕೌಂಟ್ ಗೆ ಡ್ರೈವರ್ ಕಂಡಕ್ಟರ್ ಗಳಿಂದ ಲಕ್ಷಾಂತರ ರೂಪಾಯಿ ಹಣವನ್ನು ಗೂಗಲ್ ಪೇ ಫೋನ್ ಪೇ ಮೂಲಕ ಹಾಕಿಸಿಕೊಂಡಿರೋದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಏಳು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

Advertisement
Tags :
LatetsNewsNewsKannadaಅಧಿಕಾರಿಕೋಟಿ ರುಪಾಯಿಗೂಗಲ್ ಪೇಫೋನ್‌ ಪೇಬಿಎಂಟಿಸಿಲಂಚ
Advertisement
Next Article