ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್ಯದಲ್ಲಿ ಮೂರು ವರ್ಷದಲ್ಲಿ 9,860 ಪೋಕ್ಸೋ ಕೇಸ್ ದಾಖಲು

ಕಳೆದ 3 ವರ್ಷಗಳಲ್ಲಿ ಒಟ್ಟು 9,860 ಪೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂದು ಮಕ್ಕಳ ರಕ್ಷಣಾ ಆಯೋಗ ಆಘಾತಕಾರಿ ಮಾಹಿತಿ ನೀಡಿದೆ.
03:27 PM Jan 25, 2024 IST | Ashika S

ಬೆಂಗಳೂರು: ಕಳೆದ 3 ವರ್ಷಗಳಲ್ಲಿ ಒಟ್ಟು 9,860 ಪೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂದು ಮಕ್ಕಳ ರಕ್ಷಣಾ ಆಯೋಗ ಆಘಾತಕಾರಿ ಮಾಹಿತಿ ನೀಡಿದೆ.

Advertisement

2021ರಲ್ಲಿ 2880 ಪ್ರಕರಣಗಳು, 2022ರಲ್ಲಿ 3,189 ಪ್ರಕರಣಗಳು, 2023ರಲ್ಲಿ 3791 ಪ್ರಕರಣಗಳು,ಒಟ್ಟು 9860 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ಒಂದರಲ್ಲಿ 2021ರಲ್ಲಿ 403 ಪ್ರಕರಣಗಳು ದಾಖಲಾಗಿದೆ, 2022ರಲ್ಲಿ 480 ಹಾಗೂ 2023ರಲ್ಲಿ 571 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮೂರು ವರ್ಷಗಳ ಅವಧಿಯಲ್ಲಿ ಬೆಂಗಳೂರಲ್ಲಿ ಒಟ್ಟು 1454 ಪ್ರಕರಣಗಳು ದಾಖಲಾಗಿವೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್​ ಕೋಸಂಬೆ, ರಾಜ್ಯದಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ 9860 ಕೇಸ್​ಗಳು ವರದಿಯಾಗಿವೆ. ಈ ಮೂಲಕ ಕಾನೂನಿನ ದೂರದೃಷ್ಟಿ ವಿಫಲವಾಗಿದೆ. ಯಾಕಂದರೆ ಇಷ್ಟು ಪ್ರಕರಣಗಳಲ್ಲಿ ಕೇವಲ 200 ಕೇಸ್​ಗಳಿಗೆ ಮಾತ್ರ ಶಿಕ್ಷೆ ಆಗಿದೆ.

200 ಕೇಸ್​ಗಳು ಮಾತ್ರ ಕೋರ್ಟ್​​ನಲ್ಲಿ ನಡೆಯುತ್ತಿವೆ. ದೂರುದಾರ ರಾಜಿ, ಪೊಲೀಸ್ ಇಲಾಖೆಯ ವೈಫಲ್ಯಗಳಿಂದ ಪ್ರಕರಣಗಳು ಫೇಲ್ಯೂರ್ ಆಗುತ್ತಿವೆ. ವರದಿ ಬೆನ್ನಲ್ಲೇ ನಮ್ಮ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತಿದ್ದೇವೆ ಎಂದು ಆಗ್ರಹಿಸಿದ್ದಾರೆ.

Advertisement
Tags :
LatetsNewsNewsKannadaಪೋಕ್ಸೋಪ್ರಕರಣಮಕ್ಕಳ ರಕ್ಷಣಾ ಆಯೋಗಮಾಹಿತಿವರ್ಷ
Advertisement
Next Article