For the best experience, open
https://m.newskannada.com
on your mobile browser.
Advertisement

ಮಸೀದಿಯಲ್ಲಿ 13 ವರ್ಷದ ಬಾಲಕನ ಮೇಲೆ ಅತ್ಯಾಚಾರ !

ಪವಿತ್ರ ಮಾಸ ರಂಜಾನ್ ಸಮಯದಲ್ಲೇ ಪಾಕಿಸ್ತಾನ ಮಸೀದಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಮಾಜು ಮಾಡುವುದಕ್ಕಾಗಿ ಮಸೀದಿಗೆ ತೆರಳಿದ್ದ 13 ವರ್ಷದ ಬಾಲಕನ ಮೇಲೆ ಮಸೀದಿಯೊಳಗೆಯೇ ಅತ್ಯಾಚಾರ ನಡೆದಿದೆ. 28 ವರ್ಷದ ಯುವಕನೋರ್ವ 13 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.
12:13 PM Apr 07, 2024 IST | Ashitha S
ಮಸೀದಿಯಲ್ಲಿ 13 ವರ್ಷದ ಬಾಲಕನ ಮೇಲೆ ಅತ್ಯಾಚಾರ

ಮುಜಾಫರ್‌ಗರ್‌: ಪವಿತ್ರ ಮಾಸ ರಂಜಾನ್ ಸಮಯದಲ್ಲೇ ಪಾಕಿಸ್ತಾನ ಮಸೀದಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಮಾಜು ಮಾಡುವುದಕ್ಕಾಗಿ ಮಸೀದಿಗೆ ತೆರಳಿದ್ದ 13 ವರ್ಷದ ಬಾಲಕನ ಮೇಲೆ ಮಸೀದಿಯೊಳಗೆಯೇ ಅತ್ಯಾಚಾರ ನಡೆದಿದೆ. 28 ವರ್ಷದ ಯುವಕನೋರ್ವ 13 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.

Advertisement

ಸಂತ್ರಸ್ತ ಬಾಲಕ ಇತಿಕಾಫ್ ಆಚರಣೆ ಮಾಡುತ್ತಿದ್ದು, ಜೊತೆಗೆ ಇದೇ ಮಸೀದಿಯಲ್ಲೇ ಇದ್ದು, ಕುರಾನ್ ಅಧ್ಯಯನದಲ್ಲಿ ತೊಡಗಿದ್ದ, ಮಸೀದಿಯೊಳಗೆಯೇ ಘಟನೆ ನಡೆದಿದ್ದು, 28 ವರ್ಷದ ಕಾಮುಕನ ಕೃತ್ಯ ಮಸೀದಿಯ ಮೌಲ್ವಿ ಕಣ್ಣಿಗೆ ಬಿದ್ದಿದ್ದು, ತನ್ನ ಈ ಪಾಪಕೃತ್ಯಕ್ಕೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೌಲ್ವಿ ಹೇಳುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ನಂತರ ಮಸೀದಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಕೃತ್ಯ ಎಸಗಿದವ ವಿರುದ್ದ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

Advertisement

Advertisement
Tags :
Advertisement