ಕರ್ನಾಟಕ1 | ಬೆಂಗಳೂರು-ಮೈಸೂರು-ಮಲೆನಾಡು-ಬೆಳಗಾವಿ-ಕರಾವಳಿ-ಕಲಬುರಗಿ-
ಹೊರನಾಡ ಕನ್ನಡಿಗರು1
ದೇಶ-ವಿದೇಶ-1 | ದೇಶ-1
ವಿಶೇಷ-
ವಿಜ್ಞಾನ/ತಂತ್ರಜ್ಞಾನ | ಸಾಂಡಲ್ ವುಡ್
ಮನರಂಜನೆ-ಕ್ರೀಡೆ-1ಕ್ಯಾಂಪಸ್-1
ಇತರೆ- | ಆರೋಗ್ಯ-ಅಡುಗೆ ಮನೆ-ಸಮುದಾಯ-ಕ್ರೈಮ್-ಶಿಕ್ಷಣ-ವಿಡಿಯೊ-ಪಾಡ್‌ಕಾಸ್ಟ್‌-ಉದ್ಯೋಗ-
Advertisement

70 ಗ್ರಾಂ ಚಿನ್ನವಿದ್ದ ಬ್ಯಾಗ್‌ ಕಳವು: ಪತ್ತೆ ಹಚ್ಚಿದ ಧಾರವಾಡ ಶಹರ ಠಾಣೆ ಪೊಲೀಸರು

ಹುಬ್ಬಳ್ಳಿ ಮೂಲದ ಸರ್ವಮಂಗಳ ವಕ್ಕುಂದ ಎಂಬ ವೃದ್ಧೆ ಬ್ಯಾಗ್‌ನ್ನು ಇತ್ತೀಚೆಗೆ ಕಳೆದುಕೊಂಡಿದ್ದರು. ಆ ಬಗ್ಗೆ ಅವರು ಧಾರವಾಡ ಶಹರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
04:19 PM Jul 15, 2024 IST | Chaitra Kulal

ಧಾರವಾಡ: ಹುಬ್ಬಳ್ಳಿ ಮೂಲದ ಸರ್ವಮಂಗಳ ವಕ್ಕುಂದ ಎಂಬ ವೃದ್ಧೆ ಬ್ಯಾಗ್‌ನ್ನು ಇತ್ತೀಚೆಗೆ ಕಳೆದುಕೊಂಡಿದ್ದರು. ಆ ಬಗ್ಗೆ ಅವರು ಧಾರವಾಡ ಶಹರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

Advertisement

ದೂರು ದಾಖಲಾದ ಕೆಲವೇ ದಿನಗಳಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಚಿನ್ನವಿದ್ದ ಬ್ಯಾಗ್‌ನ್ನು ಪತ್ತೆ ಮಾಡಿ ಮರಳಿ ಆ ವಯೋವೃದ್ಧರಿಗೆ ಹಸ್ತಾಂತರಿಸುವ ಮೂಲಕ ಮೆಚ್ಚುಗೆ ಕಾರ್ಯ ಮಾಡಿದ್ದಾರೆ.

ಅಂದಾಜು 5.5 ಲಕ್ಷ ಮೌಲ್ಯದ 70 ಗ್ರಾಂ ಚಿನ್ನದ ಸಾಮಾನುಗಳಿದ್ದ ಬ್ಯಾಗ್‌ನ್ನು ಧಾರವಾಡದ ಗಾಂಧಿ ಸರ್ಕಲ್ ಬಳಿ ಕಳೆದುಕೊಂಡಿದ್ದರು. ಆ ಬ್ಯಾಗ್ ಕಳೆದುಕೊಂಡ ನಂತರ ಅವರು ಶಹರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

Advertisement

ಈ ಪ್ರಕರಣದ ತನಿಖೆ ನಡೆಸಿದ ಸಿಪಿಐ ಎನ್‌.ಸಿ.ಕಾಡದೇವರಮಠ, ಪಿಎಸ್‌ಐ ಚಂದ್ರಶೇಖರ ಮದರಖಂಡಿ, ಕ್ರೈಂ ಸಿಬ್ಬಂದಿಯಾದ ಎಂ.ಬಿ.ಗೆದ್ದಿಕೇರಿ, ಡಿ.ವಿ.ಘಾಳರೆಡ್ಡಿ, ಜಿ.ಜಿ.ಚಿಕ್ಕಮಠ, ಪಿ.ಬುರ್ಜಿ, ಪ್ರವೀಣ ತಿರ್ಲಾಪುರ ಅವರು ಆ ಬ್ಯಾಗ್‌ನ್ನು ಪತ್ತೆ ಮಾಡಿ ಅದನ್ನು ಮರಳಿ ವಯೋವೃದ್ಧರಿಗೆ ಹಸ್ತಾಂತರಿಸಿದ್ದಾರೆ.

Advertisement
Tags :
DharwadGoldLATEST NEWSNews KarnatakaPolice
Advertisement
Next Article