ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿ ಕಚೇರಿಯಿಂದ ಕರೆ, ಮೆಚ್ಚುಗೆ ಪತ್ರ

ಪ್ರಧಾನಿಯವರ ಚಿತ್ರ ಬಿಡಿಸಿ ರೋಡ್ ಶೋ ವೇಳೆ ಖುದ್ದು ಮೋದಿಯವರಿಗೇ ನೀಡಿರುವ ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿಯವರ ಕಚೇರಿಯಿಂದ ಬುಧವಾರ ಕರೆ ಬಂದಿದ್ದು, ಮೆಚ್ಚುಗೆ ಪತ್ರ ನೀಡಿದ್ದಾರೆ.
04:11 PM Apr 18, 2024 IST | Chaitra Kulal

ಮಂಗಳೂರು: ಪ್ರಧಾನಿಯವರ ಚಿತ್ರ ಬಿಡಿಸಿ ರೋಡ್ ಶೋ ವೇಳೆ ಖುದ್ದು ಮೋದಿಯವರಿಗೇ ನೀಡಿರುವ ಕರಾವಳಿಯ ಕಲಾವಿದ ಕಿರಣ್ ಸಿ. ಅವರಿಗೆ ಪ್ರಧಾನಿ ಮೋದಿಯವರ ಕಚೇರಿಯಿಂದ ಬುಧವಾರ ಕರೆ ಬಂದಿದ್ದು, ಮೆಚ್ಚುಗೆ ಪತ್ರ ನೀಡಿದ್ದಾರೆ.

Advertisement

ತೊಕ್ಕೊಟ್ಟುವಿನ ಪಿಲಾರ್ ನ ಕಲಾವಿದ ಕಿರಣ್ ಸಿ. ಅವರು ಮೋದಿಯವರ ಚಿತ್ರ ಬಿಡಿಸಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಧಾನಿ ರೋಡ್ ಶೋ ವೇಳೆ ಪ್ರದರ್ಶಿಸಿದ್ದಾರೆ. ಇದನ್ನು ಮೋದಿಯವರು ಗಮನಿಸಿ, ತಕ್ಷಣ ಎಸ್ ಪಿ ಜಿ ಕಮಾಂಡೊ ಮೂಲಕ ಚಿತ್ರವನ್ನು ತರಿಸಿ ಕಲಾವಿದನಿಗೆ ರೋಡ್ ಶೋ ವೇಳೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕಲಾವಿದ ಕಿರಣ್ ಅವರಿಗೆ ನಿನ್ನೆ ಪ್ರಧಾನಿ ಕಚೇರಿಯಿಂದಲೇ ಕರೆ ಬಂದಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಕೊಂಚ ಹೊತ್ತಿನ ಬಳಿಕ ಖುದ್ದು ಪ್ರಧಾನಿಯವರ ಪತ್ರ ಅವರಿಗೆ ಇ-ಮೈಲ್ ಮೂಲಕ ರವಾನೆಯಾಗಿದೆ. ಇದರಲ್ಲಿ ಮೆಚ್ಚುಗೆಯ ಮಾತುಗಳನ್ನು ಬರೆಯಲಾಗಿದೆ‌.

Advertisement

"ನೀವು ಉತ್ತಮ ಕೌಶಲ್ಯದಿಂದ ಮಾಡಿದ ಚಿತ್ರಕಲೆ ನಮ್ಮ ಯುವಶಕ್ತಿಯ ಸಾರವನ್ನು ಬಿಂಬಿಸಿದೆ. ನಾವು ಪ್ರಗತಿಪರ ಭಾರತದ ನಿರ್ಮಾಣಕ್ಕೆ ಮತ್ತು ನಮ್ಮ ಯುವಕರಿಗೆ ಭರವಸೆಯ ನಾಳೆಯನ್ನು ಭದ್ರಪಡಿಸಲು ಶ್ರಮಿಸುತ್ತಿರುವಾಗ, ಇಂತಹ ಪ್ರೀತಿಯ ಸಂಕೇತ ರಾಷ್ಟ್ರ ಮತ್ತು ಜನ ಸೇವೆಯಲ್ಲಿ ಇನ್ನಷ್ಟು ಶ್ರಮಿಸಲು ನನಗೆ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತವೆ.

2047 ರಲ್ಲಿ ನಾವು ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಸಮೀಪಿಸುತ್ತಿರುವ ವೇಳೆ, ಅಭಿವೃದ್ಧಿ ಹೊಂದಿದ ಭಾರತದ ಭವಿಷ್ಯವು ಸಮರ್ಥ ಕೈಯಲ್ಲಿದೆ ಎಂದು ನಮ್ಮ ಯುವಶಕ್ತಿಯ ಹುರುಪು ನನಗೆ ಭರವಸೆ ನೀಡುತ್ತದೆ.

ನಿಮ್ಮ ಸೃಜನಶೀಲ ಕೌಶಲ್ಯಗಳಿಗೆ ಅಭಿವ್ಯಕ್ತಿ ನೀಡುವುದನ್ನು ನೀವು ಮುಂದುವರಿಸಿ. ಶುಭಾಶಯಗಳು" ಎಂದು ಬರೆಯಲಾಗಿದೆ. ಪ್ರಧಾನಿಯವರ ಕಚೇರಿಯಿಂದಲೇ ಕರೆ ಬಂದು, ಮೆಚ್ಚುಗೆ ಪತ್ರ ಬಂದಿರುವುದು ಕಿರಣ್ ಸಿ. ಅವರಿಗೆ ಸಂತಸ ತಂದಿದೆಯಂತೆ.

Advertisement
Tags :
LatestNewsNewsKarnatakaPRIME MINISTERRoad showಕರಾವಳಿಕಿರಣ್ ಸಿ.ಮಂಗಳೂರು
Advertisement
Next Article