For the best experience, open
https://m.newskannada.com
on your mobile browser.
Advertisement

ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಟ್ರ್ಯಾಕ್ಟರ್‌ ಉಡುಗೊರೆಯಾಗಿ ನೀಡಿದ ಫ್ಯಾನ್‌

ಬಾಕ್ಸ್‌ ಆಫೀಸ್‌ ಸುಲ್ತಾನ ನಟ ದರ್ಶನ್‌ 47ನೇ ಹುಟ್ಟುಹಬ್ಬದ ಸಂಭ್ರಮ ಜೋರಾಗಿದ್ದು, ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಆಚರಿಸುತ್ತಿದ್ದಾರೆ. ಈಗಾಗಲೇ ರಾಜರಾಜೇಶ್ವರಿ ನಗರದಲ್ಲಿರು ದರ್ಶನ್ ತೂಗುದೀಪ‌ ನಿವಾಸದಲ್ಲಿ ನಿನ್ನೆಯಿಂದಲೇ ಸಡಗರ ಮೆನೆಮಾಡಿದೆ. ಈ ಬಾರಿ ಚಾಲೆಂಜಿಂಗ್‌ ಸ್ಟಾರ್‌ ಜನ್ಮದಿನಕ್ಕೆ ಅಭಿಮಾನಿಯಿಂದ ಭರ್ಜರಿ ಉಡುಗೊರೆ ದೊರಕಿದೆ.
10:13 AM Feb 16, 2024 IST | Ashitha S
ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಟ್ರ್ಯಾಕ್ಟರ್‌ ಉಡುಗೊರೆಯಾಗಿ ನೀಡಿದ ಫ್ಯಾನ್‌

ಬೆಂಗಳೂರು:  ಬಾಕ್ಸ್‌ ಆಫೀಸ್‌ ಸುಲ್ತಾನ ನಟ ದರ್ಶನ್‌ 47ನೇ ಹುಟ್ಟುಹಬ್ಬದ ಸಂಭ್ರಮ ಜೋರಾಗಿದ್ದು, ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಆಚರಿಸುತ್ತಿದ್ದಾರೆ. ಈಗಾಗಲೇ ರಾಜರಾಜೇಶ್ವರಿ ನಗರದಲ್ಲಿರು ದರ್ಶನ್ ತೂಗುದೀಪ‌ ನಿವಾಸದಲ್ಲಿ ನಿನ್ನೆಯಿಂದಲೇ ಸಡಗರ ಮೆನೆಮಾಡಿದೆ. ಈ ಬಾರಿ ಚಾಲೆಂಜಿಂಗ್‌ ಸ್ಟಾರ್‌ ಜನ್ಮದಿನಕ್ಕೆ ಅಭಿಮಾನಿಯಿಂದ ಭರ್ಜರಿ ಉಡುಗೊರೆ ದೊರಕಿದೆ.

Advertisement

ದರ್ಶನ್‌ ಬರ್ತ್‌ಡೇ ಸ್ಪೆಷಲ್‌ ಅಂತ ಈಗಾಗಲೇ ಅಭಿಮಾನಿಯೊಬ್ಬರು ಸ್ಪೆಷಲ್ ಕಾಮನ್ ಡಿಪಿ ಕ್ರಿಯೇಟ್ ಮಾಡಿ ತಮ್ಮ ಫೇವರೇಟ್‌ ನಟನ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಚಾಲನೆ ನೀಡಿದ್ದರು. ಇನ್ನೂ ದರ್ಶನ್‌ ಮಧ್ಯರಾತ್ರಿಯೇ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾಗೆ ಫ್ಯಾನ್ಸ್‌ ನೆಚ್ಚಿನ ನಟನನ್ನು ನೋಡಿ, ಕೈ ಕುಲುಕಿ ಶುಭ ಕೋರಿದ್ದಾರೆ.

ನಟ ದರ್ಶನ್‌ ಒಂದು ತಿಂಗಳ ಹಿಂದೆಯೇ ಅಭಿಮಾನಿಗಳಲ್ಲಿ ತಮ್ಮ ಹುಟ್ಟುಹಬ್ಬದಂದು ಹಾರ, ಬ್ಯಾನರ್, ಕೇಕ್ ತರಬೇಡಿ. ಅದರ ಬದಲು ದವಸ ಧಾನ್ಯ ಉಡುಗೊರೆ ನೀಡಿ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುತ್ತೇನೆ ಎಂದು ಮನವಿ ಮಾಡಿದ್ದಾರೆ. ಆದರೆ ಅಲ್ಲಿಯೊಬ್ಬ ದರ್ಶನ್‌ ಫ್ಯಾನ್‌ ಅಚ್ಚುಮೆಚ್ಚಿನ ನಟನಿಗೆ ಟ್ರ್ಯಾಕ್ಟರ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

Advertisement

ದರ್ಶನ್‌ಗೆ ಹುಟ್ಟುಹಬ್ಬದ ಉಡುಗರೆಯಾಗಿ ಅಭಿಮಾನಿಯೊಬ್ಬರು ACE ಬ್ರ್ಯಾಂಡ್‌ DI-550 STAR ಮಾಡೆಲ್ ಟ್ರ್ಯಾಕ್ಟರ್‌ ಅನ್ನು ಆರ್‌. ಆರ್‌ ನಗರದ ನಿವಾಸಕ್ಕೆ ತಂದು ಕೊಟ್ಟರು. ಬಳಿಕ ದರ್ಶನ್‌ ಟ್ರ್ಯಾಕ್ಟರ್ ಏರಿ ಒಂದು ರೌಂಡ್ ಸುತ್ತಿದ್ದಾರೆ.

Advertisement
Tags :
Advertisement