For the best experience, open
https://m.newskannada.com
on your mobile browser.
Advertisement

15 ದಿನದ ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಿದ ಪಾಪಿ ತಂದೆ

ತನ್ನ ಹದಿನೈದು ದಿನದ ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಿ ಪಾಪಿ ತಂದೆಯೊಬ್ಬ ವಿಕೃತಿ ಮೆರೆದಿದ್ದಾನೆ. ಪಾಕಿಸ್ತಾನದಲ್ಲಿ ಈ ಹೃದಯ ವಿದ್ರಾವಕವಾದ ಘಟನೆ ನಡೆದಿದೆ.
12:16 PM Jul 08, 2024 IST | Ashitha S
15 ದಿನದ ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಿದ ಪಾಪಿ ತಂದೆ

ಪಾಕಿಸ್ತಾನ: ತನ್ನ ಹದಿನೈದು ದಿನದ ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಿ ಪಾಪಿ ತಂದೆಯೊಬ್ಬ ವಿಕೃತಿ ಮೆರೆದಿದ್ದಾನೆ. ಪಾಕಿಸ್ತಾನದಲ್ಲಿ ಈ ಹೃದಯ ವಿದ್ರಾವಕವಾದ ಘಟನೆ ನಡೆದಿದೆ. ನೌಶಹ್ರೋ ಫಿರೋಜ್​​ ಎಂಬ ವ್ಯಕ್ತಿ ತನ್ನ ಮಗುವನ್ನು ಜೀವಂತ ಸಮಾಧಿ ಮಾಡಿದ್ದಾನೆ ಎಂದು ವರದಿಯಾಗಿದೆ.

Advertisement

ಈ ಬಗ್ಗೆ ಆ ವ್ಯಕ್ತಿಯೋ ಪೊಲೀಸರ ಮುಂದೆ ಬಂದು ಬಾಯಿ ಬಿಟ್ಟಿದ್ದಾನೆ. ತನಿಖೆ ವೇಳೆ ಫಿರೋಜ್​​ ನಾನೇ ನನ್ನ ಕೈಯಾರೆ ಮಗುವನ್ನು ಜೀವಂತ ಸಮಾಧಿ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ತನ್ನ 15 ದಿನ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲ ಎಂದು, ಗೋಣಿ ಚೀಲದಲ್ಲಿ ಕಟ್ಟಿ ಹೂತಿಟ್ಟಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಮಗುವನ್ನು ಹೆಣ್ಣು ಎಂದು ಗುರುತಿಸಲಾಗಿದ್ದು. ಪೊಲೀಸರು ನೌಶಹ್ರೋ ಫಿರೋಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಲಯದ ಆದೇಶದ ಮೇರೆಗೆ ಮರಣೋತ್ತರ ಪರೀಕ್ಷೆಗಾಗಿ ಮಗುವನ್ನು ಸಮಾಧಿಯಿಂದ ಹೊರ ತೆಗೆದು ವಿಧಿವಿಜ್ಞಾನ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Advertisement
Tags :
Advertisement