For the best experience, open
https://m.newskannada.com
on your mobile browser.
Advertisement

ಮಹಿಳೆಯಿಂದ ಪುರುಷನಾದ ಐಆರ್‌ಎಸ್‌ ಅಧಿಕಾರಿ: ಹೆಸರು, ಲಿಂಗ ಬದಲಾವಣೆಗೆ ಕೇಂದ್ರ ಒಪ್ಪಿಗೆ

ಹೈದರಾಬಾದ್ ಮೂಲದ ಭಾರತೀಯ ಕಂದಾಯ ಸೇವೆ ಹಿರಿಯ ಅಧಿಕಾರಿಯೊಬ್ಬರು ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾಯಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಿದೆ.
05:56 PM Jul 10, 2024 IST | Chaitra Kulal
ಮಹಿಳೆಯಿಂದ ಪುರುಷನಾದ ಐಆರ್‌ಎಸ್‌ ಅಧಿಕಾರಿ  ಹೆಸರು  ಲಿಂಗ ಬದಲಾವಣೆಗೆ ಕೇಂದ್ರ ಒಪ್ಪಿಗೆ

ನವದೆಹಲಿ: ಹೈದರಾಬಾದ್ ಮೂಲದ ಭಾರತೀಯ ಕಂದಾಯ ಸೇವೆ ಹಿರಿಯ ಅಧಿಕಾರಿಯೊಬ್ಬರು ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾಯಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಿದೆ.

Advertisement

ಹೈದರಾಬಾದ್‌ನಲ್ಲಿರುವ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿರುವ ಎಂ.ಅನುಸೂಯಾ ಅವರು ತಮ್ಮ ಹೆಸರನ್ನು ಎಂ.ಅನುಕತಿರ್ ಸೂರ್ಯ ಎಂದು ಮತ್ತು ಲಿಂಗವನ್ನು ಹೆಣ್ಣಿನಿಂದ ಪುರುಷ ಎಂದು ಬದಲಾಯಿಸಲು ವಿನಂತಿಸಿದ್ದರು.

ಅಧಿಕಾರಿಯ ಮನವಿಯನ್ನು ಪರಿಗಣಿಸಿ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಎಂ.ಅನುಸೂಯಾ ಅವರ ಮನವಿಯನ್ನು ಪರಿಗಣಿಸಲಾಗಿದೆ. ಇನ್ಮುಂದೆ ಅಧಿಕಾರಿಯನ್ನು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ‘ಎಂ.ಅನುಕತಿರ್ ಸೂರ್ಯ’ ಎಂದು ಪರಿಗಣಿಸಲಾಗುತ್ತದೆ ಎಂದು ಕಂದಾಯ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಆದೇಶದಲ್ಲಿ ತಿಳಿಸಿದೆ.

Advertisement

Advertisement
Tags :
Advertisement