ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೀನ್ಯಾದಲ್ಲಿ ಗ್ಯಾಸ್​​​ ತುಂಬಿದ್ದ ಟ್ರಕ್​​ ಸ್ಫೋಟ: ಗಡಗಡ ನಡುಗಿದ ಎಂಬಾಕಸಿ ನಗರ

ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಬೆಳಗಿನ ಜಾವ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡ ಮತ್ತು ವಾಹನಗಳು ಸುಟ್ಟು ಕರಕಲಾಗಿದ್ದು, ಭೀಕರ ಘಟನೆಯಲ್ಲಿ 3 ಮಂದಿ ಸಾವನ್ನಪ್ಪಿ 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
07:24 AM Feb 03, 2024 IST | Ashika S

ನೈರೋಬಿಯ: ಕೀನ್ಯಾದ ರಾಜಧಾನಿ ನೈರೋಬಿಯ ಎಂಬಾಕಸಿ ಎಂಬ ನಗರದಲ್ಲಿರುವ ಜನವಸತಿ ಪ್ರದೇಶದಲ್ಲಿದ್ದ ಗ್ಯಾಸ್​​​ ಫಿಲ್ಲಿಂಗ್​​​​ ಸ್ಟೇಷನ್​​ನಲ್ಲಿ ಗ್ಯಾಸ್​​​ ತುಂಬಿದ್ದ ಟ್ರಕ್​​ವೊಂದು ಸ್ಫೋಟಗೊಂಡಿದೆ.

Advertisement

ಬೆಳಗಿನ ಜಾವದ ಭೀಕರ ಅಗ್ನಿ ಅವಘಡಕ್ಕೆ ಕಟ್ಟಡ ಮತ್ತು ವಾಹನಗಳು ಸುಟ್ಟು ಕರಕಲಾಗಿದ್ದು, ಬ್ಲಾಸ್ಟ್​​​​ನ ಪರಿಣಾಮ ಇಡೀ ಎಂಬಾಕಸಿ ನಗರವೇ ನಡುಗಿದೆ.

ಭೀಕರ ಬ್ಲಾಸ್ಟ್​​​​ನಿಂದಾಗಿ ಸ್ಥಳದಲ್ಲಿದ್ದ ಮೂವರು ಜೀವ ಚೆಲ್ಲಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಮಾಹಿತಿ ಲಭ್ಯವಾಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಭೀಕರವಾಗಿ ಗಾಯಗೊಂಡಿದ್ದಾರೆ.

Advertisement

ಸ್ಫೋಟದಿಂದಾಗಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಕ್ಕಪಕ್ಕದಲ್ಲಿದ್ದ ಇದ್ದ ಸಣ್ಣ ಅಂಗಡಿ, ಮಳಿಗೆಗಳು ಸೇರಿದಂತೆ ಜನರು ವಾಸಿಸುತ್ತಿದ್ದ ಕಟ್ಟಡಗಳಿಗೂ ಬೆಂಕಿ ಆವರಿಸಿಕೊಂಡಿದ್ದು, ಸ್ಫೋಟದ ತೀವ್ರತೆಯಿಂದಾಗಿ ಬೃಹತ್​​​​​ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಘಟನೆಯ ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಸತತ 3 ಗಂಟೆ ಕಾರ್ಯಚರಣೆ ಬಳಿಕ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ.

ಗ್ಯಾಸ್​​​ ಫಿಲ್ಲಿಂಗ್​ ಸ್ಟೇಷನ್​​ನ ಬೇಜವಬ್ದಾರಿಯೇ ಈ ಘಟನೆಗೆ ಕಾರಣ ಎನ್ನಲಾಗ್ತಿದೆ.

Advertisement
Tags :
LatetsNewsNewsKannadaಅಗ್ನಿ ಅವಘಡಕೀನ್ಯಾನೈರೋಬಿಯಸ್ಫೋಟ
Advertisement
Next Article