ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಿತ್ರೋಡಿಯಲ್ಲಿ ಕಾರ್ಮಿಕನ ಮೇಲೆ ಪ್ರೇತಾತ್ಮದ ಆವೇಶ

ಭೂತ ಪ್ರೇತಗಳು ಈ ಭೂಮಿ ಮೇಲೆ ಇದ್ದಾವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂತಹ ಅಗೋಚರ ಪ್ರೇತಾತ್ಮಗಳ ಭಯಾನಕ ಅನುಭವ ಪಡೆದವರು ಹಲವರಿದ್ದಾರೆ. ಅದೇ ರೀತಿಯ ಘಟನೆ ಉದ್ಯಾವರದಲ್ಲಿ ನಡೆದಿದೆ.
04:46 PM Nov 23, 2023 IST | Ashika S

ಉಡುಪಿ: ಭೂತ ಪ್ರೇತಗಳು ಈ ಭೂಮಿ ಮೇಲೆ ಇದ್ದಾವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂತಹ ಅಗೋಚರ ಪ್ರೇತಾತ್ಮಗಳ ಭಯಾನಕ ಅನುಭವ ಪಡೆದವರು ಹಲವರಿದ್ದಾರೆ. ಅದೇ ರೀತಿಯ ಘಟನೆ ಉದ್ಯಾವರದಲ್ಲಿ ನಡೆದಿದೆ.

Advertisement

ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶ ಬಂದು ದಾಳಿ ನಡೆಸಿದಾಗ ಸಹೋದ್ಯೋಗಿಗಳು ಎದ್ನೋ ಬಿದ್ನೋ ಎಂದು ಓಡಿದ ಘಟನೆ ಜಿಲ್ಲೆಯ ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ. ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಮೀನು ಕಟ್ಟಿಂಗ್ ಶೆಡ್​ನಲ್ಲಿ ಉತ್ತರ ಭಾರತದ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲರೂ ಒಂದೇ ರೂಮಿನಲ್ಲಿ ನೆಲೆಸಿದ್ದರು. ಆದರೆ, ತಡರಾತ್ರಿ 11 ರ ವೇಳೆಗೆ ಬಿಹಾರ ಮೂಲದ ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಆವೇಶವಾಗಿದೆ. ಪ್ರೇತಾತ್ಮ ಆಹ್ವಾನೆ ಆಗುತ್ತಲೇ ಸಹೋದ್ಯೋಗಿಗಳ ಮೇಲೆ ದಾಳಿ ನಡೆಸಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ರೂಮ್​ನಿಂದ ಒಬ್ಬರ ಮೇಲೆ ಒಬ್ಬರು ಬಿದ್ದು ಎದ್ದು ಓಡಿ ಹೋಗಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳಾಗಿವೆ.

Advertisement

ಈ ಬಗ್ಗೆ ದೆವ್ವ ಆಹ್ವಾನೆಗೆ ಒಳಗಾದ ಕಾರ್ಮಿಕನೇ ಹೇಳಿಕೆ ನೀಡಿದ್ದಾರೆ. ನಾವು ಮಾರಿ ಕಟ್ಟೆಯ ಬಳಿ ಬಾಯಲ್ಲಿ ವಿಮಲ್ ಹಾಕಿಕೊಂಡು ಅಲ್ಲಿದ್ದ ಕುರ್ಚಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆವು.

ಏಕಾಏಕಿ ನನ್ನ ಸುತ್ತ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ನಾನು ಭಯದಿಂದ ಕೂಗಿ ಕೊಳ್ಳುತ್ತಾ ಓಡಿದೆ ಮುಂದೇನಾಯ್ತು ಎಂಬ ಪರಿವೆ ನನಗೆ ಆ ಸಮಯದಲ್ಲಿ ಇಲ್ಲದೆ ಹೋಯಿತು ಎಂದಿದ್ದಾರೆ.

Advertisement
Tags :
LatestNewsNewsKannadaಅಗೋಚರಅನುಭವಉದ್ಯಾವರಪ್ರೇತಾತ್ಮಭೂತ ಪ್ರೇತ
Advertisement
Next Article