For the best experience, open
https://m.newskannada.com
on your mobile browser.
Advertisement

ಕಡಬ: ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕ ಸಾವು

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕನೊಬ್ಬ ಸಾವನಪ್ಪಿದ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ.
10:02 AM May 12, 2024 IST | Ashitha S
ಕಡಬ  ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕ ಸಾವು

ಕಡಬ: ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು ಬಡಿದು ಮರಳುಗಾರಿಕೆ ಮಾಡುತ್ತಿದ್ದ ಕಾರ್ಮಿಕನೊಬ್ಬ ಸಾವನಪ್ಪಿದ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ.

Advertisement

ಮೃತರನ್ನು ಉತ್ತರ ಪ್ರದೇಶ ಚೈನ್‌ಪುರ್ ಮೂಲದ ಶ್ರೀಕಿಶುನ್ ಎಂದು ಗುರುತಿಸಲಾಗಿದೆ. ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನದಿ ಬದಿಯಲ್ಲಿ ಮರಳುಗಾರಿಕೆ ಮಾಡುತ್ತಿದ್ದ ಉತ್ತರಪ್ರದೇಶದ ಕಾರ್ಮಿಕರು ಇದ್ದ ಶೆಡ್ ಗೆ ಸಿಡಿಲು ಬಡಿದಿದೆ.

ಈ ವೇಳೆ ಓರ್ವ ಸಾವನಪ್ಪಿದವರೆ ಮತ್ತೆ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರಲಾಗಿದೆ.

Advertisement

ಇನ್ನು ಈ ಹಿಂದೆ ಮೇ 3ರಂದು ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ನವವಿವಾಹಿತ ಮೃತಪಟ್ಟಿದರು.  ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಸಿಡಿಲು ಬಡಿದು ಸೋಮಸುಂದರ್ (34) ಸಾವನ್ನಪ್ಪಿದ್ದರು. ಇವರು ಹತ್ತು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಸಂಜೆ ವೇಳೆ ಸುಬ್ರಮಣ್ಯ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆ ಅಂಗಳದಲ್ಲಿ ಅಡಿಕೆಯನ್ನು ಯುವಕ ರಾಶಿ ಮಾಡುತ್ತಿದ  ವೇಳೆ ಸೋಮ ಸುಂದರ್‌ಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾರೆ.

Advertisement
Tags :
Advertisement