For the best experience, open
https://m.newskannada.com
on your mobile browser.
Advertisement

ಎತ್ತ ಸಾಗುತ್ತಿದೆ ಬೆಂಗಳೂರು; ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಯುವಕ ಪರಾರಿ

ನಗರದಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರಿಗೆ ದಿನದಿಂದ ದಿನಕ್ಕೆ ಅಸುರಕ್ಷಿತ ಎಂಬ ಭೀತಿ ಎದುರಾಗುತ್ತಿದೆ. ಕಾಮುಕನೊಬ್ಬ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡಿ ಪರಾರಿಯಾಗಿರುವ ಘಟನೆ ವಿ.ವಿ.ಪುರಂನಲ್ಲಿ ನಡೆದಿದೆ.
02:23 PM Jul 08, 2024 IST | Ashitha S
ಎತ್ತ ಸಾಗುತ್ತಿದೆ ಬೆಂಗಳೂರು  ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಯುವಕ ಪರಾರಿ

ಬೆಂಗಳೂರು: ನಗರದಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರಿಗೆ ದಿನದಿಂದ ದಿನಕ್ಕೆ ಅಸುರಕ್ಷಿತ ಎಂಬ ಭೀತಿ ಎದುರಾಗುತ್ತಿದೆ. ಪದೇ ಪದೇ ಇಂತಹ ಘಟನೆಗಳು ಬೆಳಕಿಗೆ ಬರುತ್ತಲೇ ಇದೆ. ಕಾಮುಕನೊಬ್ಬ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗ ತೋರಿಸಿ ಕಿರುಕುಳ ನೀಡಿ ಪರಾರಿಯಾಗಿರುವ ಘಟನೆ ವಿ.ವಿ.ಪುರಂನಲ್ಲಿ ನಡೆದಿದೆ.

Advertisement

ಕಾಲೇಜು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ, ಬೈಕ್ ನಲ್ಲಿ ಬರುವ ಕಾಮುಕನೊಬ್ಬ ಮುಖಕ್ಕೆ ಬಟ್ಟೆಕಟ್ಟಿಕೊಂಡು ಬೈಕ್ ನಲ್ಲಿ ಬಂದು ದುರ್ವರ್ತನೆ ತೋರಿದ್ದಾನೆ.

ಬೈಕ್ ನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಕಾಮುಕನೊಬ್ಬ, ವಿ.ವಿ.ಪುರಂ ರಸ್ತೆಯಲ್ಲಿ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿಯರು ಓಡಾಡುವ ಕಡೆಯೇ ಬೈಕ್ ನಿಲ್ಲಿಸಿ ಇಂತಹ ಅಸಭ್ಯವರ್ತನೆ ಮೆರೆದು ಬೈಕ್ ಹತ್ತಿ ಪರಾರಿಯಾಗುತ್ತಾನೆ.

Advertisement

ಕಾಮುಕನ ವಿಕೃತಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿನಿಯರು ವಿ.ವಿ.ಪುರಂ ಪೊಲೀಸರಿಗೆ ದೂರು ನೀಡಿದ್ದು, ಕ್ರಾಮುಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Advertisement
Tags :
Advertisement