For the best experience, open
https://m.newskannada.com
on your mobile browser.
Advertisement

ಏಳು ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಹಡಗು

ಏಳು ವರ್ಷಗಳ ಬಳಿಕ ಮತ್ತೆ ಮಂಗಳೂರು ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದ್ದು, ಗುರುವಾರ ಸಂಜೆ ಲಕ್ಷದ್ವೀಪದಿಂದ 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದು ಪರೇಲಿ ಎಂಬ ಐಷಾರಾಮಿ ಹಡಗು ಮಂಗಳೂರಿನ ಹಳೇ ಬಂದರಿಗೆ ಬಂದಿದೆ.
10:25 AM May 03, 2024 IST | Chaitra Kulal
ಏಳು ವರ್ಷಗಳ ಬಳಿಕ ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಹಡಗು

ಮಂಗಳೂರು: ಏಳು ವರ್ಷಗಳ ಬಳಿಕ ಮತ್ತೆ ಮಂಗಳೂರು ಲಕ್ಷದ್ವೀಪದ ನಡುವೆ ಹೈಸ್ಪೀಡ್ ಹಡಗು ಸಂಚಾರ ಆರಂಭವಾಗಿದ್ದು, ಗುರುವಾರ ಸಂಜೆ ಲಕ್ಷದ್ವೀಪದಿಂದ 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದು ಪರೇಲಿ ಎಂಬ ಐಷಾರಾಮಿ ಹಡಗು ಮಂಗಳೂರಿನ ಹಳೇ ಬಂದರಿಗೆ ಬಂದಿದೆ.

Advertisement

ಈ ಐಷಾರಾಮಿ ಹಡಗಿನಲ್ಲಿ 150 ಪ್ರಯಾಣಿಕರು ಸೇರಿದಂತೆ 8 ಮಂದಿ ಸಿಬ್ಬಂದಿ, ಓರ್ವ ಪೈಲಟ್, ಚೀಫ್ ಇಂಜಿನಿಯರ್, ಸಹಾಯಕ ಇಂಜಿನಿಯರ್‌ ಬಂದಿಳಿದಿದ್ದಾರೆ.

ಕಳೆದ ಏಳು ವರ್ಷಗಳಿಂದ ಲಕ್ಷದ್ವೀಪದಿಂದ ಕೇವಲ ಸರಕು ಸಾಗಣೆ ಹಡಗುಗಳಷ್ಟೇ ಬರುತ್ತಿತ್ತು. ಸದ್ಯ ಹೈಸ್ಪೀಡ್ ಹಡಗು ಲಕ್ಷದ್ವೀಪದಿಂದ ಆಗಮಿಸಿದ್ದು, ಇದರಿಂದ ಮತ್ತೆ ಮಂಗಳೂರು ಹಾಗೂ ಲಕ್ಷದ್ವೀಪ ನಡುವಿನ ಬಾಂಧವ್ಯವನ್ನು ಬೆಸೆಯುವ ಆಶಾದಾಯಕ ಬೆಳವಣಿಗೆ ಆದಂತಾಗಿದೆ.

Advertisement

ಸಾಮಾನ್ಯ ಹಡಗು ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ತಾಸುಗಳು ಅವಧಿ ಅವಶ್ಯಕ. ಆದರೆ ಪರೆಲಿ ಎಂಬ ಈ ಹೈಸ್ಪೀಡ್ ಹಡಗು ಏಳು ತಾಸಿನಲ್ಲಿ ಮಂಗಳೂರು ತಲುಪಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಲಕ್ಷದ್ವೀಪದ ಕ್ಲಿಂಟನ್ ನಿಂದ ಹೊರಟ ಹಡಗು ಸಂಜೆ 5 ಗಂಟೆಯ ವೇಳೆಗೆ ಬಂದರಿಗೆ ಬಂದು ತಲುಪಿದೆ. ಪ್ರತಿ ಪ್ರಯಾಣಿಕರಿಗೆ 350 ರೂ. ಪ್ರಯಾಣ ದರ ಇತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Advertisement
Tags :
Advertisement