For the best experience, open
https://m.newskannada.com
on your mobile browser.
Advertisement

ಪುತ್ತಿಲ ಪರಿವಾರದಿಂದ ಹೊರನಡೆದು ರಾಜಕೀಯ ನಿವೃತ್ತಿ ಘೋಷಿಸಿದ ರಾಜಾರಾಂ‌ ಭಟ್

ಪುತ್ತಿಲ ಪರಿವಾರಕ್ಕೆ ರಾಜಾರಾಂ‌ ಭಟ್ ಗುಡ್ ಬೈ ಹೇಳಿದ್ದಾರೆ. ರಾಜಾರಾಂ ಭಟ್ ಅರುಣ್ ಪುತ್ತಿಲ ಅವರೊಂದಿಗೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು.
06:08 PM Mar 12, 2024 IST | Ashitha S
ಪುತ್ತಿಲ ಪರಿವಾರದಿಂದ ಹೊರನಡೆದು ರಾಜಕೀಯ ನಿವೃತ್ತಿ ಘೋಷಿಸಿದ ರಾಜಾರಾಂ‌ ಭಟ್

ಪುತ್ತೂರು: ಪುತ್ತಿಲ ಪರಿವಾರಕ್ಕೆ ರಾಜಾರಾಂ‌ ಭಟ್ ಗುಡ್ ಬೈ ಹೇಳಿದ್ದಾರೆ. ರಾಜಾರಾಂ ಭಟ್ ಅರುಣ್ ಪುತ್ತಿಲ ಅವರೊಂದಿಗೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು.

Advertisement

ಇಂದು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿ ಪುತ್ತಿಲ ಪರಿವಾರಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ಯಾವುದೇ ಸಂಘಟನೆ ಪರಿವಾರದಲ್ಲಿ ಗುರುತಿಸಿಕೊಳ್ಳಲ್ಲ. ಇನ್ಮುಂದೆ ನಾನೊಬ್ಬ ಸ್ವತಂತ್ರ ಮತದಾರ. ಪರಿವಾರದಿಂದ ಹೊರಬರಲು ವೈಯಕ್ತಿಕ ಕಾರಣವಿದೆ ಎಂದು ಹೇಳಿದ್ದಾರೆ. ಈ ಮೂಲಕ ಸಕ್ರೀಯ ರಾಜಕಾರಣದಿಂದಲೇ ಹಿಂದೇ ಸರಿದಿದ್ದಾರೆ ರಾಜಾರಾಂ ಭಟ್.ಇವರು ಪುತ್ತಿಲ ಪರಿವಾರದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಇದೀಗ ಏಕಾಏಕಿ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದ್ದು ಪುತ್ತಿಲ ಪರಿವಾರದಲ್ಲಿ ಬಿಕ್ಕಟ್ಟು ಮೂಡುವ ಸಾಧ್ಯತೆ ಎದ್ದು ಕಾಣುತ್ತಿದೆ.

Advertisement

Advertisement
Tags :
Advertisement