For the best experience, open
https://m.newskannada.com
on your mobile browser.
Advertisement

ನಾಲ್ವರಿಂದ ಓರ್ವ ಮಹಿಳೆಯ ಬಟ್ಟೆ ಹರಿದು ಹಲ್ಲೆ: ದೂರು ನಿರಾಕರಿಸಿದ ಖಾಕಿ

ಫೆ.5 ರಂದು ಯಲ್ಲಾಪುರ ಬಸ್‌ ನಿಲ್ದಾಣದಲ್ಲಿ ಒರ್ವ ಮಹಿಳೆ ಮೇಲೆ ನಾಲ್ವರು ಮಹಿಳೆಯರು ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ. ಈ ವಿರುದ್ಧ ಪೊಲೀಸರಿಗೆ ಮಹಿಳೆ ದೂರು ನೀಡಲು ಹೋದಾಗ ಸಣ್ಣ ವಿಷಯ ಎಂದು ನಿರಾಕರಿಸಿದ್ದಾರೆ. ಹೀಗಾಗಿ ನೊಂದ ಮಹಿಳೆ ಮಾದ್ಯಮದ ಎದರು ಕಣ್ಣೀರು ಹಾಕಿದ್ದಾರೆ.
06:21 PM Feb 23, 2024 IST | Gayathri SG
ನಾಲ್ವರಿಂದ ಓರ್ವ ಮಹಿಳೆಯ ಬಟ್ಟೆ ಹರಿದು ಹಲ್ಲೆ  ದೂರು ನಿರಾಕರಿಸಿದ ಖಾಕಿ

ಉತ್ತರಕನ್ನಡ: ಫೆ.5 ರಂದು ಯಲ್ಲಾಪುರ ಬಸ್‌ ನಿಲ್ದಾಣದಲ್ಲಿ ಒರ್ವ ಮಹಿಳೆ ಮೇಲೆ ನಾಲ್ವರು ಮಹಿಳೆಯರು ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ. ಈ ವಿರುದ್ಧ ಪೊಲೀಸರಿಗೆ ಮಹಿಳೆ ದೂರು ನೀಡಲು ಹೋದಾಗ ಸಣ್ಣ ವಿಷಯ ಎಂದು ನಿರಾಕರಿಸಿದ್ದಾರೆ. ಹೀಗಾಗಿ ನೊಂದ ಮಹಿಳೆ ಮಾದ್ಯಮದ ಎದರು ಕಣ್ಣೀರು ಹಾಕಿದ್ದಾರೆ.

Advertisement

ಯಲ್ಲಾಪುರ ತಾ| ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗದಬೈಲ್​ ಗ್ರಾಮದಲ್ಲಿ ಸಿದ್ಧಿ ಸಮಾಜದ ದಮಾಮಿ ಹೋಮ್ ಸ್ಟೇ ರೂಪುಗೊಂಡಿದೆ. ಇದರ ಅವ್ಯವಹಾರವನ್ನು ರಾಜೇಶ್ವರಿ ಅವರು ಆರ್ ಟಿ ಐ ದಿಂದ ಮಾಹಿತಿ ಕೇಳಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಸಿದ್ದಿ ಸಮಾಜದ ಸಾಮಾಜಿಕ ಕಾರ್ಯಕರ್ತೆ, ಈ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಹಾಗೂ ಈ ವಿರುದ್ಧ ಹರಿದ ಬಟ್ಟೆಯಲ್ಲೇ ದೂರು ನೀಡಲು ಯಲ್ಲಾಪುರದ ಪೊಲೀಸ್‌ ಠಾಣೆಗೆ ಹೋಗಿದ್ದು ಅಧಿಕಾರಗಳು ಆ ನಾಲ್ವರ ಪ್ರಕರಣದಾಖಲು ಮಾಡಲು ಹಿಂದೇಟು ಹಾಕಿದ್ದಾರೆ.

ಇನ್ನು ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಒತ್ತಾಯದಿಂದ ಫೆಬ್ರವರಿ 20 ರಂದು ಕೇಸ್ ದಾಖಲು ಮಾಡಲಾಗಿದೆ. ಆದ್ರೆ, ಇದುವರೆಗೂ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ರಕ್ಷಣೆ ಬೇಕು, ನನಗೆ ನ್ಯಾಯ ಬೇಕೆಂದು ಕೈ ಮುಗಿದು ನೊಂದ ಮಹಿಳೆ ರಾಜೇಶ್ವರಿ ಕಣ್ಣಿರು ಹಾಕಿದ್ದಾರೆ.ಸದ್ಯ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ರಾಜೇಶ್ವರಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Advertisement
Tags :
Advertisement