For the best experience, open
https://m.newskannada.com
on your mobile browser.
Advertisement

‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು ಮಾಜಿ ಪತ್ನಿಗೆ ​ ಪ್ರಶ್ನೆ ಮಾಡಿದ ಅಮಿರ್​ ಖಾನ್

ಬಾಲಿವುಡ್​ನ ನಟ ಅಮಿರ್ ಖಾನ್​ ಮತ್ತು ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ಬಳಿಕವೂ ಅನ್ಯೋನ್ಯವಾಗಿ ಇರುವ ಜೋಡಿ. ಡಿವೋರ್ಸ್ ಬಳಿಕ ಕಿರಣ್​ ರಾವ್​ ಅವರಲ್ಲಿ ಅಮಿರ್ ‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು ಮಾಜಿ ಪತ್ನಿಗೆ ಅಮಿರ್​ ಖಾನ್​ ಪ್ರಶ್ನೆ ಮಾಡಿದ್ದರು ಎಂಬ ವಿಚಾರ ಇದೀಗ ಅಮಿರ್ ಖಾನ್ ಅವರಿಂದಲೇ ಬಹಿರಂಗವಾಗಿದೆ.
08:20 AM Feb 25, 2024 IST | Gayathri SG
‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು ಮಾಜಿ ಪತ್ನಿಗೆ ​ ಪ್ರಶ್ನೆ ಮಾಡಿದ ಅಮಿರ್​ ಖಾನ್

ಬಾಲಿವುಡ್​ನ ನಟ ಅಮಿರ್ ಖಾನ್​ ಮತ್ತು ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ಬಳಿಕವೂ ಅನ್ಯೋನ್ಯವಾಗಿ ಇರುವ ಜೋಡಿ. ಡಿವೋರ್ಸ್ ಬಳಿಕ ಕಿರಣ್​ ರಾವ್​ ಅವರಲ್ಲಿ ಅಮಿರ್ ‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು ಮಾಜಿ ಪತ್ನಿಗೆ ಅಮಿರ್​ ಖಾನ್​ ಪ್ರಶ್ನೆ ಮಾಡಿದ್ದರು ಎಂಬ ವಿಚಾರ ಇದೀಗ ಅಮಿರ್ ಖಾನ್ ಅವರಿಂದಲೇ ಬಹಿರಂಗವಾಗಿದೆ.

Advertisement

‘ಎಬಿಪಿ ನೆಟ್​ವರ್ಕ್​’ನ ಕಾರ್ಯಕ್ರಮವೊಂದರಲ್ಲಿ ಆಮಿರ್​ ಖಾನ್​ ಮತ್ತು ಕಿರಣ್ ರಾವ್​ ಅವರು ಜೊತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮ ವಿಚ್ಛೇದನದ ಬಗ್ಗೆಯೂ ಮಾತನಾಡಿದರು. ಒಂದು ದಿನ ಸಂಜೆ ನಾವಿಬ್ಬರು ಕುಳಿತಿದ್ದಾಗ ಕಿರಣ್​ಗೆ ಒಂದು ಪ್ರಶ್ನೆ ಕೇಳಿದೆ. ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ? ಜೀವನದಲ್ಲಿ ಮುಂದೆ ಸಾಗುತ್ತಿದ್ದೇನೆ. ನನ್ನನ್ನು ನಾನು ಸುಧಾರಿಸಿಕೊಳ್ಳಬೇಕು’ ಎಂದು ಕಿರಣ್​ ರಾವ್​ಗೆ ಆಮಿರ್​ ಖಾನ್​ ಹೇಳಿದ್ದರು. ಆ ಮಾತಿಗೆ ಕಿರಣ್​ ರಾವ್​ ಅವರು ಕೂಡಲೇ ಉತ್ತರ ನೀಡಿದ್ದರು. ‘ಓಕೆ.. ಬರೆದುಕೊಳ್ಳಿ ಅಂತ ಕಿರಣ್​ ನನಗೆ ಪಟ್ಟಿ ನೀಡಿದರು. ನೀವು ಬಹಳ ಮಾತನಾಡುತ್ತೀರಿ. ಬೇರೆಯವರಿಗೆ ಮಾತನಾಡಲು ನೀವು ಬಿಡುವುದಿಲ್ಲ. ನಿಮ್ಮದೇ ವಾದಕ್ಕೆ ಅಂಟಿಕೊಂಡಿರುತ್ತೀರಿ. ಈ ರೀತಿ 15-20 ವಿಷಯಗಳ ಪಟ್ಟಿ ನೀಡಿದರು’ ಎಂದು ಮಾಜಿ ಹೆಂಡತಿಯ ಫೀಡ್​ಬ್ಯಾಕ್​ ಬಗ್ಗೆ ಆಮಿರ್​ ಖಾನ್​ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಈ ವಿಚ್ಛೇದಿತ ಜೋಡಿ ಈಗ :ಲಾಪತಾ ಲೇಡಿಸ್​’ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾಗೆ ಕಿರಣ್​ ರಾವ್ನಿರ್ದೇಶನ ಮಾಡಿದ್ದು, ಆಮಿರ್​ ಖಾನ್​ ನಿರ್ಮಾಣ ಮಾಡಿದ್ದಾರೆ. ಮಾರ್ಚ್​ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

Advertisement

Advertisement
Tags :
Advertisement